ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜಿಲ್ಲೆಯಲ್ಲಿ ಸ್ಥಾಪಿಸಿರುವ ಎರಡು ಟೋಲ್ ಪ್ಲಾಜಾಗಳಲ್ಲಿ ಮಾರ್ಚ್ 1ರಿಂದ ಟೋಲ್ ಸಂಗ್ರಹಿಸುವ ಕಾರ್ಯ ಅರಂಭವಾಗುವ ಸಾಧ್ಯತೆ ಇದೆ. ಈಗಾಗಲೆ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಅಲ್ಲದೆ ಟೋಲ್ ದರಗಳ ಪಟ್ಟಿಯು ಹೊರ ಬಿದ್ದಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನೆಲ್ಲ ಸಿದ್ಧತೆಯಾಗಿದೆ?
ಸವಳಂಗ ಸಮೀಪ ನಿರ್ಮಿಸಲಾಗಿರುವ ಟೋಲ್ ಪ್ಲಾಜಾದಲ್ಲಿ ಬುಧವಾರ ಅಂತಿಮ ಹಂತದ ಸಿದ್ಧತೆ ನಡೆಸಲಾಯಿತು. ಗುತ್ತಿಗೆ ಪಡೆದಿರುವ ಸಂಸ್ಥೆಯ ಸಿಬ್ಬಂದಿ ಟೋಲ್ ಪ್ಲಾಜಾದ ವಿವಿಧ ಉಪಕರಣಗಳ ಪರಿಶೀಲನೆ ನಡೆಸಿದರು. ಸಿಸಿಟಿವಿ, ಲೈಟಿಂಗ್ ವ್ಯವಸ್ಥೆ, ಮೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ಪೂರೈಕೆಯ ಪರಿಶೀಲನೆ ನಡೆಸಲಾಯಿತು. ಈಗಾಗಲೇ ಟೋಲ್ ಪ್ಲಾಜಾದ ಎರಡು ಕಡೆ ರಸ್ತೆ ಬದಿಯಲ್ಲಿ ಸ್ಥಳೀಯರು ಅಂಗಡಿಗಳನ್ನು ಸ್ಥಾಪಿಸಿದ್ದಾರೆ.
ಯಾವ್ಯಾವ ವಾಹನಕ್ಕೆ ಎಷ್ಟಿದೆ ಟೋಲ್?
- ಶಿವಮೊಗ್ಗ – ಶಿಕಾರಿಪುರ
ವಾಹನ | ಏಕಮುಖ ಸಂಚಾರ | ದ್ವಿಮುಖ ಸಂಚಾರ | ಮಾಸಿಕ ದರ |
ಕಾರು, ಜೀಪ್, ವ್ಯಾನ್, ಲಘು ವಾಹನ | ರೂ. 35 | ರೂ. 55 | ರೂ. 1245 |
ಲಘು ವಾಣಿಜ್ಯ, ಗೂಡ್ಸ್, ಮಿನಿ ಬಸ್ | ರೂ. 60 | ರೂ.90 | ರೂ. 2005 |
ಬಸ್, ವಾಣಿಜ್ಯ ವಾಹನ (ಡಬಲ್ ಆಕ್ಸಲ್) | ರೂ. 125 | ರೂ.190 | ರೂ. 4205 |
ಬಸ್, ವಾಣಿಜ್ಯ ವಾಹನ (ಮೂರು ಆಕ್ಸಲ್) | ರೂ. 130 | ರೂ. 195 | ರೂ. 4285 |
ಭಾರಿ ನಿರ್ಮಾಣ ಯಂತ್ರೋಪಕರಣ, ನಾಲ್ಕರಿಂದ ಆರು ಆಕ್ಸಲ್ ವಾಹನ, ಅರ್ಥ್ ಮೂವಿಂಗ್ ಉಪಕರಣ | ರೂ.200 | ರೂ. 295 | ರೂ. 6595 |
ಭಾರಿ ಗಾತ್ರದ ವಾಹನ (ಏಳು ಅಥವಾ ಹೆಚ್ಚು ಆಕ್ಸಲ್) | ರೂ. 240 | ರೂ. 360 | ರೂ. 8030 |
- ಶಿಕಾರಿಪುರ ಹಾನಗಲ್
ವಾಹನ | ಏಕಮುಖ ಸಂಚಾರ | ದ್ವಿಮುಖ ಸಂಚಾರ | ಮಾಸಿಕ ದರ |
ಕಾರು, ಜೀಪ್, ವ್ಯಾನ್, ಲಘು ವಾಹನ | ರೂ. 50 | ರೂ.70 | ರೂ. 1600 |
ಲಘು ವಾಣಿಜ್ಯ, ಗೂಡ್ಸ್, ಮಿನಿ ಬಸ್ | ರೂ. 75 | ರೂ. 115 | ರೂ. 2585 |
ಬಸ್, ವಾಣಿಜ್ಯ ವಾಹನ (ಡಬಲ್ ಆಕ್ಸಲ್) | ರೂ. 160 | ರೂ. 245 | ರೂ. 5415 |
ಬಸ್, ವಾಣಿಜ್ಯ ವಾಹನ (ಮೂರು ಆಕ್ಸಲ್) | ರೂ. 165 | ರೂ. 250 | ರೂ. 5510 |
ಭಾರಿ ನಿರ್ಮಾಣ ಯಂತ್ರೋಪಕರಣ, ನಾಲ್ಕರಿಂದ ಆರು ಆಕ್ಸಲ್ ವಾಹನ, ಅರ್ಥ್ ಮೂವಿಂಗ್ ಉಪಕರಣ | ರೂ. 255 | ರೂ. 380 | ರೂ. 8490 |
ಭಾರಿ ಗಾತ್ರದ ವಾಹನ (ಏಳು ಅಥವಾ ಹೆಚ್ಚು ಆಕ್ಸಲ್) | ರೂ. 310 | ರೂ. 465 | ರೂ. 10335 |
ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್ ಬಿಸಿ, 2 ಕಡೆ ಟೋಲ್ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?