ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್ ಖರೀದಿ (railway ticket booking) ವ್ಯವಸ್ಥೆಯನ್ನು ತುಂಬಾ ಸರಳೀಕೃತಗೊಳಿಸಿದೆ. UN RESERVED ಕೆಟಗರಿಯ (ಜನರಲ್ ಬೋಗಿ) ರೈಲುಗಳ ಟಿಕೆಟ್ ಖರೀದಿಗೆ ಹೊಸ ರೂಪ ನೀಡಿದೆ. ಜನರಲ್ ಬೋಗಿ ಟಿಕೆಟ್‌ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ, ಚಿಲ್ಲರೆಗಾಗಿ ತಡಕಾಡಬೇಕಿಲ್ಲ. ಮೊಬೈಲ್‌ನಲ್ಲೇ ಟಿಕೆಟ್ ಖರೀದಿಸಬಹುದಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
UN RESERVED ಟಿಕೆಟ್
ಕೆಲವು ಬೋಗಿ ಅಥವಾ ರೈಲುಗಳಿಗೆ ರಿಸರ್ವೇಷನ್ ಕಡ್ಡಾಯ. ಹಾಗಾಗಿ ಸೀಟ್ ಕಾಯ್ದಿರಿಸಲು ವೆಬ್‌ಸೈಟ್ ಅಥವಾ ಮೊಬೈಲ್ ಆಪ್‌ನಲ್ಲೇ ಅವಕಾಶ ಕಲ್ಪಿಸಲಾಗಿದೆ. ಆದರೆ ಜನರಲ್ ಬೋಗಿಗಳ ಟಿಕೆಟ್ ಖರೀದಿಗೆ ((railway ticket booking) ರೈಲ್ವೆ ನಿಲ್ದಾಣಕ್ಕೇ ಹೋಗಬೇಕು, ಕ್ಯೂನಲ್ಲಿ ನಿಲ್ಲಬೇಕು, ಚಿಲ್ಲರೆ ಇಲ್ಲದಿದ್ದರೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಬೇಕು. ಇದೆ ಕಾರಣಕ್ಕೆ ಹಲವರು ಚಿಂತೆಗೀಡಾಗುತ್ತಾರೆ. ಈ ಸಮಸ್ಯೆಗೆ ರೈಲ್ವೆ ಇಲಾಖೆ ಪರಿಹಾರ ಕಂಡುಕೊಂಡಿದೆ. ಜನರಲ್ ಬೋಗಿಯ ಟಿಕೆಟ್‌ಗಳನ್ನು ಮೊಬೈಲ್ APP ಮೂಲಕವೇ ಖರೀದಿಸಬಹುದಾಗಿದೆ.
ಇದನ್ನೂ ಓದಿ- ದಸರಾ ರಜೆ, ಪ್ರಯಾಣಿಕರ ಅನುಕೂಲಕ್ಕಾಗಿ KSRTCಯಿಂದ ವಿಶೇಷ ವ್ಯವಸ್ಥೆ
ಯಾವುದದು APP? ಏನೆಲ್ಲ ಇದೆ?
ರೈಲ್ವೆ ಇಲಾಖೆ ವತಿಯಿಂದ UTS MOBILE APP (UNRESERVED TICKETS APP) ಬಿಡುಗಡೆ ಮಾಡಲಾಗಿದೆ. GOOGLE PLAY STOREನಲ್ಲಿ ಈ APP ಲಭ್ಯವಿದೆ. ಇದನ್ನು ಡೌನ್ ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕಿದೆ.
APPನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಮೊದಲು PAPER LESS ಅಥವಾ PAPER ಎಂಬ ಎರಡು ಆಪ್ಷನ್ ಪೈಕಿ ಒಂದನ್ನು ಆಯ್ಕೆ ಮಾಡಬೇಕು. ನಂತರ ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ತೆರಳಬೇಕು ಎಂದು ನಮೂದಿಸಬೇಕು.
ಟಿಕೆಟ್ ದರ ಪಾವತಿಗೆ R-WALLET ಆಪ್ಷನ್ ಇದೆ. ಮೊದಲೆ walletನಲ್ಲಿ ಹಣ ಇರಿಸಿದ್ದರೆ ಟಿಕೆಟ್ ಖರೀದಿ ಮಾಡಬಹುದು. ಇಲ್ಲವಾದಲ್ಲಿ UPI, NET BANKING, CREDIT CARD, DEBIT CARD ಮೂಲಕವು ಟಿಕೆಟ್ ಖರೀದಿಸಬಹುದು.
ಇದನ್ನೂ ಓದಿ- ಇನ್ಮುಂದೆ ಮೆಟ್ರೋ ರೈಲಿನಲ್ಲೇ ಊರಿಗೆ ಹೋಗಬಹುದು, ರೆಡಿಯಾಗುತ್ತಿದೆ ವಂದೇ ಮೆಟ್ರೋ, ವಿಶೇಷತೆಗಳೇನು?
UTS APPನಲ್ಲಿ SHOW TICKET ಆಪ್ಷನ್ ಕ್ಲಿಕ್ ಮಾಡಿದರೆ PAPER LESS ಟಿಕೆಟ್ ಅನ್ನು ರೈಲ್ವೆ ಟಿಟಿಇಗೆ ತೋರಿಸಬಹುದು. PAPER ಟಿಕೆಟ್ ಅಗತ್ಯವಿದ್ದರೆ ಬುಕಿಂಗ್ ಅವಧಿಯಲ್ಲಿ ಒದಗಿಸಿದ ID ಬಳಸಿ ಬುಕಿಂಗ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ಈ APP ಮೂಲಕ ಪ್ಲಾಟ್ ಫಾರಂ ಟಿಕೆಟ್ ಕೂಡ ಖರೀದಿಸಬಹುದಾಗಿದೆ. R- WALLETನಲ್ಲಿ ಹಣವಿರಿಸಿ ಟಿಕೆಟ್ ಖರೀದಿಸಿದರೆ ಶೇ.3ರಷ್ಟು ಬೋನಸ್ ನೀಡಲಾಗುತ್ತದೆ.