ಶಿವಮೊಗ್ಗ LIVE
ಶಿವಮೊಗ್ಗ: ಅಂಗವಿಕಲರಿಗೆ 2026ನೇ ಸಾಲಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‌ಗಳ (bus passes) ವಿತರಣೆ ಹಾಗೂ ನವೀಕರಣಕ್ಕೆ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.30ರಿಂದ ಫೆ.28ರವರೆಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.
ಹೊಸದಾಗಿ ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡಿಕೊಳ್ಳಬೇಕು. 2025ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಬೇಕು.

ಇದನ್ನೂ ಓದಿ » ಹೋಂ ಸ್ಟೇ ಮಾಲೀಕ, ರೂಂ ಬಾಯ್ ಸೇರಿ ಮೂವರಿಗೆ 20 ವರ್ಷ ಜೈಲು, ದಂಡ, ಕಾರಣವೇನು?
ಪಾಸ್ ಪಡೆಯಲು ಬರುವಾಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ಅಂಗವಿಕಲರ ಗುರುತಿನ ಚೀಟಿ ಪುಸ್ತಕ ಅಥವಾ ಯುಡಿಐಡಿ ಸ್ಮಾರ್ಟ್ ಕಾರ್ಡ್, ಅಂಗವೈಕಲ್ಯದ ಬಗ್ಗೆ ಪ್ರಮಾಣಪತ್ರ, ಫಲಾನುಭವಿಗಳ ಇತ್ತೀಚಿನ ಮೂರು ಭಾವಚಿತ್ರ, 2025ನೇ ಸಾಲಿನಲ್ಲಿ ಪಡೆದಿರುವ ಮೂಲ ಪಾಸ್, ಆಧಾರ್ ಇಲ್ಲವೇ ಪಡಿತರ ಚೀಟಿ ನೀಡಬೇಕು. ಇದೆಲ್ಲವೂ ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿರಬೇಕು. ಪಾಸ್ ಶುಲ್ಕ ₹660 ನಗದು ಮೂಲಕ ಪಾವತಿಸಬೇಕು.
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





