ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರಿಶೀಲನೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

ರೈಲ್ವೆ ಸುದ್ದಿ: ಶಿವಮೊಗ್ಗ – ಭದ್ರಾವತಿ ನಡುವಿನ ಎಲ್‌.ಸಿ (level crossing) 42,46 ಮತ್ತು 47 ಗಳನ್ನು ಮುಚ್ಚಲು ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.3 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಎಲ್‌ಸಿ 43- ಯಲವಟ್ಟಿ ರಸ್ತೆ: ಅ.28ರ ಬೆಳಗ್ಗೆ 8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ.

ಎಲ್‌ಸಿ 46- ಚಿತ್ರದುರ್ಗ ರಸ್ತೆ: ಅ.30ರ ಬೆಳಗ್ಗೆ 8 ರಿಂದ ಅ.31 ರ ಸಂಜೆ 6 ರವರೆಗೆ ಹೊಸದಾಗಿ ನಿರ್ಮಿಸಿದ ಮೇಲ್ಸೇತುವೆ ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ.

Shimoga-Yeshwanthapura-Train-South-Western-Railway

ಎಲ್‌ಸಿ 47-ಮಲ್ಲೇಶ್ವರ ನಗರ ರಸ್ತೆ: ನ.2 ರ ಬೆಳಗ್ಗೆ 8 ರಿಂದ ನ.3ರ ಸಂಜೆ 6 ರವರೆಗೆ ಮಲ್ಲೇಶ್ವರ ನಗರ ರಸ್ತೆ – ಹೊನ್ನಾಳಿ ರಸ್ತೆ – ಸಂಗೊಳ್ಳಿ ರಾಯಣ್ಣ ಸರ್ಕಲ್ – ಶಂಕರಮಠ ಸಂಪರ್ಕ ಎಲ್ ಸಿ 47 ರ ಮಾರ್ಗವಿರುತ್ತದೆ. ಮಲ್ಲೇಶ್ವರನಗರ ರಸ್ತೆಯು ಕಚ್ಚಾ ಮಣ್ಣಿನ ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕ ಅವಕಾಶ ಕಲ್ಪಿಸಿ, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ » ‘ನಾನೂ ಸಚಿವ ಸ್ಥಾನದ ಅಕಾಂಕ್ಷಿ’, ಮಿನಿಸ್ಟರ್‌ ಪದವಿ ಬಗ್ಗೆ ಬೇಳೂರು ಏನೆಲ್ಲ ಹೇಳಿದರು?

level crossing

Shimoga-Yeshwanthapura-Train-South-Western-Railway

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment