ಶಿವಮೊಗ್ಗಕ್ಕೆ ಶಾಶ್ವತವಾಯ್ತು ಮತ್ತೊಂದು ರೈಲು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಜಿಲ್ಲೆಗೆ ಮತ್ತೊಂದು ರೈಲ್ವೆ ಸೇವೆ (Railway service) ನಿರಂತರವಾಗಿ ದೊರೆಯುತ್ತಿದೆ. ಇಷ್ಟು ದಿನ ವಾರಾಂತ್ಯದಲ್ಲಿ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದ ಯಶವಂತಪುರ – ತಾಳಗುಪ್ಪ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು (Weekly Express Train) ಮೇ 15ರಿಂದ ಶಾಶ್ವತ ಸೇವೆಯಾಗಿ (Permanent service) ಬದಲಾಗಲಿದೆ. ಪ್ರತಿ ಶುಕ್ರವಾರ ಯಶವಂತಪುರದಿಂದ, ಶನಿವಾರ ತಾಳಗುಪ್ಪದಿಂದ ಪ್ರಯಾಣ ಆರಂಭಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಮೇ 15ರ ರಾತ್ರಿ 10:20ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 5:30ಕ್ಕೆ ತಾಳಗುಪ್ಪ ತಲುಪಲಿದೆ. ಮೇ 16ರ ರಾತ್ರಿ 10:30ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು ರಾತ್ರಿ 11:50ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸಲಿದೆ. ಮರುದಿನ ಬೆಳಗ್ಗೆ 5:15ಕ್ಕೆ ಯಶವಂತಪುರ ತಲುಪಲಿದೆ ಎಂದಿದ್ದಾರೆ.

BY-Raghavendra-and-Train