ಶಿವಮೊಗ್ಗ ಜನಶತಾಬ್ದಿ, ಮೈಸೂರು – ತಾಳಗುಪ್ಪ ರೈಲು ಸಂಚಾರದಲ್ಲಿ ಬದಲಾವಣೆ, ಯಾವ್ಯಾವ ದಿನ? ಯಾಕೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ರೈಲ್ವೆ ಸುದ್ದಿ: ಬೆಂಗಳೂರು ಮೆಜೆಸ್ಟಿಕ್‌ನಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಸಿಟಿ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಪ್ರಮುಖ ಸುರಕ್ಷತಾ ಮೇಲ್ದರ್ಜೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆ ನೈರುತ್ಯ ರೈಲ್ವೆಯು ಈ ಮಾರ್ಗವಾಗಿ ಸಂಚರಿಸುವ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಾಣೆ ಮಾಡಿದೆ. ಶಿವಮೊಗ್ಗ ಮತ್ತು ತಾಳಗುಪ್ಪ ರೈಲುಗಳ ಸೇವೆಯಲ್ಲಿಯು ಬದಲಾವಣೆ ಆಗಿದೆ.

➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಈ ಸಂಬಂಧ ನೈಋತ್ಯ ರೈಲ್ವೆ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ಶಿವಮೊಗ್ಗ, ತಾಳಗುಪ್ಪದ ಯಾವೆಲ್ಲ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಿದೆ. ಇಲ್ಲಿದೆ ವಿವರ.

Prayanikare-Gamanisi-Indian-Railway-News

ಯಾವೆಲ್ಲ ರೈಲುಗಳ ಸಂಪೂರ್ಣ ರದ್ದತಿ?

ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16581): 2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16582): 2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರವೂ ರದ್ದಾಗಿರಲಿದೆ.

ಯಾವೆಲ್ಲ ರೈಲು ಭಾಗಶಃ ರದ್ದತಿ?

ತಾಳಗುಪ್ಪ –  ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಈ ರೈಲನ್ನು ಅರಸೀಕೆರೆ ಮತ್ತು ಕೆಎಸ್‌ಆರ್‌ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಇದು ಅರಸೀಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಶಿವಮೊಗ್ಗ ಟೌನ್ – ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12090): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಈ ರೈಲು ಅರಸೀಕೆರೆ–ಕೆಎಸ್‌ಆರ್‌ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲೇ ನಿಲ್ಲಲಿದೆ.

ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12089): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಬೆಂಗಳೂರಿನ ಬದಲಾಗಿ ಅರಸೀಕೆರೆ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.

ಯಾವೆಲ್ಲ ರೈಲುಗಳ ಮಾರ್ಗ ಬದಲಾವಣೆ?

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16228): 2026ರ ಆಗಸ್ಟ್ 3ರಂದು ತಾಳಗುಪ್ಪದಿಂದ ಹೊರಡುವ ಈ ರೈಲು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಮಾರ್ಗವಾಗಿ ಮೈಸೂರಿಗೆ ತಲುಪಲಿದೆ. ಈ ಹಿನ್ನೆಲೆ ತುಮಕೂರು, ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ನಿಲುಗಡೆಯನ್ನು ಕೈಬಿಡಲಾಗಿದೆ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227): 2026ರ ಆಗಸ್ಟ್ 3ರಂದು ಮೈಸೂರಿನಿಂದ ಹೊರಡುವ ಈ ರೈಲನ್ನು ಕೃಷ್ಣರಾಜನಗರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.