ರೈಲ್ವೆ ಮಾಹಿತಿ : ಶಿವಮೊಗ್ಗ ಮತ್ತು ಮೈಸೂರು ಮಧ್ಯೆ ನಿತ್ಯ ನಾಲ್ಕು ರೈಲುಗಳು (Train) ಸಂಚರಿಸುತ್ತಿವೆ. ಎಲ್ಲಾ ರೈಲುಗಳು ಬಹುತೇಕ ಭರ್ತಿಯಾಗಿರುತ್ತವೆ. ಶಿವಮೊಗ್ಗದಿಂದ ಮೈಸೂರಿಗೆ ಸಂಚರಿಸುವ ರೈಲುಗಳ ವೇಳಾಪಟ್ಟಿ ಇಲ್ಲಿದೆ.
ಯಾವ್ಯಾವ ರೈಲು ಯಾವಾಗ ಹೊರಡುತ್ತವೆ?
ಕುವೆಂಪು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 8.20ಕ್ಕೆ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.
![]() |
ಶಿವಮೊಗ್ಗ – ಮೈಸೂರು ಎಕ್ಸ್‌ಪ್ರೆಸ್ : ಬೆಳಗ್ಗೆ 11.15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಸಂಜೆ 4.50ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ಮಧ್ಯಾಹ್ನ 2.50ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಸಂಜೆ 4.50ಕ್ಕೆ ಹೊರಡಲಿದೆ. ರಾತ್ರಿ 10.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ವಾರದ ಎಲ್ಲ ದಿನವು ಈ ರೈಲು ಸಂಚರಿಸಲಿದೆ.
ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ : ತಾಳಗುಪ್ಪದಿಂದ ರಾತ್ರಿ 8.55ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ 11 ಗಂಟೆಗೆ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.
ಇದನ್ನೂ ಓದಿ » ಸ್ನೇಹಿತನ ಭೇಟಿಗೆ ರಾತ್ರಿ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ವ್ಯಕ್ತಿಗೆ ಕಾದಿತ್ತು ಆಘಾತ, ನಾಲ್ವರು ಅರೆಸ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200