ತಾಳಗುಪ್ಪ – ಮೈಸೂರು, ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ ಸೇರಿ ಹಲವು ರೈಲುಗಳ ಕುರಿತು ಪ್ರಮುಖ ಅಪ್‌ಡೇಟ್‌

ಶಿವಮೊಗ್ಗ: ಶಿವಮೊಗ್ಗ, ತಾಳಗುಪ್ಪ, ಸಿಂಧನೂರು ಹಾಗೂ ಕಾರವಾರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಪ್ರಮುಖ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು 2027ರ ಏಪ್ರಿಲ್ 15 ರವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶಿಸಿದೆ. ಈ ಹಿಂದೆ 2026ರ ಅಕ್ಟೋಬರ್ 15 ರವರೆಗೆ ಮಾತ್ರ ನಿಗದಿಪಡಿಸಲಾಗಿದ್ದ ಈ ತಾತ್ಕಾಲಿಕ ನಿಲುಗಡೆಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ಅವಧಿಗೆ ಮುಂದುವರಿಸಲು ನಿರ್ಧರಿಸಲಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇಲ್ಲಿದೆ ರೈಲುಗಳು, ನಿಲುಗಡೆಯ ಪಟ್ಟಿ

  • ಕೆಎಸ್‌ಆರ್ ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ (20651/20652): ಅರಸಾಳು ಹಾಗೂ ಕುಂಸಿ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ.
  • ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (20689/20690): ಚಿಕ್ಕಬಾಣಾವರ ನಿಲ್ದಾಣ.
  • ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16228): ಮಲ್ಲೇಶ್ವರಂ ನಿಲ್ದಾಣ.
  • ಕೆಎಸ್‌ಆರ್ ಬೆಂಗಳೂರು–ಸಿಂಧನೂರು ಎಕ್ಸ್‌ಪ್ರೆಸ್ (17391/17392): ರಾಮಗಿರಿ ಮತ್ತು ಚಳಗೇರಿ ನಿಲ್ದಾಣ.
  • ಯಶವಂತಪುರ–ಬಿಕಾನೇರ್ ಎಕ್ಸ್‌ಪ್ರೆಸ್ (16587/16588): ಬೀರೂರು ನಿಲ್ದಾಣ.
  • ಕೆಎಸ್‌ಆರ್ ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ (16595/16596): ಕುಣಿಗಲ್ ನಿಲ್ದಾಣ.
  • ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್ (16239/16240): ಸಂಪಿಗೆ ರೋಡ್ ನಿಲ್ದಾಣ.
  • ಮೈಸೂರು–ತಿರುವನಂತಪುರಂ ಉತ್ತರ ಎಕ್ಸ್‌ಪ್ರೆಸ್ (16315/16316): ಮದ್ದೂರು ನಿಲ್ದಾಣ.
  • ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ಮೆಮು (66553): ಕೃಷ್ಣದೇವರಾಯ ಹಾಲ್ಟ್ ನಿಲ್ದಾಣ.
  • ಮರಿಕುಪ್ಪಂ–ಕೆಎಸ್‌ಆರ್ ಬೆಂಗಳೂರು ಮೆಮು (66519/66520) ಹಾಗೂ ಬಂಗಾರಪೇಟೆ–ಕೆಎಸ್‌ಆರ್ ಬೆಂಗಳೂರು ಮೆಮು (16521): ದೇವನಗೊಂದಿ ನಿಲ್ದಾಣ.

ರೈಲು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ರೈಲು ಪ್ರಯಾಣಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Prayanikare-Gamanisi-Indian-Railway-News