ಶಿವಮೊಗ್ಗ: ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರ ಬಳಿ ಕಾಂಪೋಸಿಟ್ ಗಿರ್ಡರ್ ಅಳವಡಿಕೆ ಕಾಮಗಾರಿ ನಡೆಸಲು ಯೋಜಿಸಲಾಗಿದೆ. ಹಾಗಾಗಿ ಹಳಿ ಮತ್ತು ವಿದ್ಯುತ್ ಮಾರ್ಗದ ಲೈನ್ ಬ್ಲಾಕ್ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ಸಮಯ ಪರಿಷ್ಕರಣೆ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 111 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ಯಾವೆಲ್ಲ ರೈಲು ರದ್ದು?
ಅಕ್ಟೋಬರ್ 26ರಂದು ತುಮಕೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16567), ಅಕ್ಟೋಬರ್ 27ರಂದು ಶಿವಮೊಗ್ಗ ಟೌನ್ – ತುಮಕೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16568) ಹಾಗೂ ಅಕ್ಟೋಬರ್ 28ರಂದು ತುಮಕೂರು – ಶಿವಮೊಗ್ಗ ಟೌನ್ ಮೆಮು (ರೈಲು ಸಂಖ್ಯೆ 66577) ಮತ್ತು ಶಿವಮೊಗ್ಗ ಟೌನ್ – ತುಮಕೂರು ಮೆಮು (ರೈಲು ಸಂಖ್ಯೆ 66578) ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದಾಗಲಿದೆ.

ರೈಲುಗಳ ಮಾರ್ಗ ಬದಲಾವಣೆ
ಅಕ್ಟೋಬರ್ 27ರಂದು ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12090) ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ತಿಪಟೂರು ಹಾಗೂ ತುಮಕೂರು ನಿಲ್ದಾಣಗಳನ್ನು ತಲುಪುವುದಿಲ್ಲ. ಅಕ್ಟೋಬರ್ 28ರಂದು ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 20652) ನಿಗದಿತ ಸಮಯಕ್ಕಿಂತ 140 ನಿಮಿಷ ತಡವಾಗಿ ತಾಳಗುಪ್ಪದಿಂದ ಹೊರಡಲಿದೆ. ಅಕ್ಟೋಬರ್ 27ರಂದು ತುಮಕೂರು – ಶಿವಮೊಗ್ಗ ಮೆಮು 20 ನಿಮಿಷ ಹಾಗೂ ಅಕ್ಟೋಬರ್ 28ರಂದು ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20689) 30 ನಿಮಿಷ ತಡವಾಗಿ ಚಲಿಸಲಿದೆ.
ರಾಜ್ಯದ ವಿವಿಧ ರೈಲುಗಳ ಸಂಚಾರ ವ್ಯತ್ಯಯ
ರಾಜ್ಯದ ವಿವಿಧ ರೈಲುಗಳ ಸಂಚಾರದಲ್ಲಿಯು ವ್ಯತ್ಯಾಸವಾಗಲಿದೆ. ಅಕ್ಟೋಬರ್ 27ರಂದು ಅರಸೀಕೆರೆ – ಬೆಂಗಳೂರು ಪ್ಯಾಸೆಂಜರ್ (56224), ಬೆಂಗಳೂರು – ಚನ್ನಪಟ್ಟಣ (56229), ಚನ್ನಪಟ್ಟಣ – ಬೆಂಗಳೂರು (56230), ಬೆಂಗಳೂರು – ಅರಸೀಕೆರೆ (56223) ಹಾಗೂ ಅಕ್ಟೋಬರ್ 28ರಂದು ಯಲಹಂಕ – ಅರಸೀಕೆರೆ (66505) ಮತ್ತು ಅರಸೀಕೆರೆ – ಯಲಹಂಕ ಮೆಮು (66506) ರೈಲುಗಳು ರದ್ದಾಗಲಿವೆ. ಅಕ್ಟೋಬರ್ 26ರ ಸಿಂಧನೂರು – ಯಶವಂತಪುರ ಎಕ್ಸ್ಪ್ರೆಸ್ (16546), ಉದಯಪುರ ಸಿಟಿ – ಮೈಸೂರು ಎಕ್ಸ್ಪ್ರೆಸ್ (19667), ಅಕ್ಟೋಬರ್ 27ರ ಪುದುಚೇರಿ – ದಾದರ್ ಎಕ್ಸ್ಪ್ರೆಸ್ (11006) ಹಾಗೂ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ (56519) ರೈಲುಗಳನ್ನು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗಕ್ಕೆ ಬದಲಾಯಿಸಲಾಗಿದೆ.
ಅಕ್ಟೋಬರ್ 28ರ ಬೆಂಗಳೂರು – ಹುಬ್ಬಳ್ಳಿ ಜನಶತಾಬ್ದಿ (12079) ಕೂಡ ಬದಲಾದ ಮಾರ್ಗದಲ್ಲಿ ಸಾಗಲಿದೆ. ಅಕ್ಟೋಬರ್ 27ರ ವಾಸ್ಕೋಡಗಾಮ – ಯಶವಂತಪುರ (17310) 120 ನಿಮಿಷ ಹಾಗೂ ಅಕ್ಟೋಬರ್ 28ರ ಚಿಕ್ಕಮಗಳೂರು – ಯಶವಂತಪುರ (16239) 60 ನಿಮಿಷ ತಡವಾಗಿ ಹೊರಡಲಿವೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.