NEWS HIGHLIGHTS
ಶಿವಮೊಗ್ಗ: ಬೀರೂರು – ತಾಳಗುಪ್ಪ ರೈಲ್ವೆ ಮಾರ್ಗದಲ್ಲಿ ರೈಲುಗಳ ಗರಿಷ್ಠ ಸಂಚಾರಿ ವೇಗವನ್ನು (maximum speed) ಹೆಚ್ಚಿಸಲಾಗಿದೆ. ಇದರಿಂದ ಪ್ರಯಾಣದ ಸಮಯ ಗಣನೀಯವಾಗಿ ಉಳಿತಾಯವಾಗಲಿದ್ದು, ಪ್ರಯಾಣಿಕರ ಅನುಭವ ಮತ್ತಷ್ಟು ಸುಧಾರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ರೈಲುಗಳ ಗರಿಷ್ಠ ಸಂಚಾರಿ ವೇಗವನ್ನು ಹೆಚ್ಚಿಸಿರುವ ಕುರಿತು ಪ್ರಕಟಣೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, ಯಾವ್ಯಾವ ಮಾರ್ಗಳಲ್ಲಿ ವೇಗ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

- ಮಾರ್ಗ 1: ಬೀರೂರು ಇಂದ ಕುಂಸಿ: ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.
- ಮಾರ್ಗ 2: ಆನಂದಪುರಂ ಇಂದ ಸಾಗರ ಜಂಬಗಾರು: ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಹೆಚ್ಚಿಸಲಾಗಿದೆ.
- ಮಾರ್ಗ 3: ಸಾಗರ ಜಂಬಗಾರು ಇಂದ ತಾಳಗುಪ್ಪ: ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.
ರೈಲುಗಳು ಹೆಚ್ಚಿನ ವೇಗದಲ್ಲಿ ಚಲಿಸುವುದರಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸುವ ಈ ಭಾಗದ ಸಾರ್ವಜನಿಕರಿಗೆ ಅಮೂಲ್ಯವಾದ ಸಮಯ ಉಳಿಯಲಿದೆ. ರೈಲುಗಳ ಈ ಸುಗಮ ಮತ್ತು ವೇಗದ ಕಾರ್ಯಾಚರಣೆಯಿಂದ ಮಲೆನಾಡಿನ ಸಂಪರ್ಕ ಕ್ರಾಂತಿಗೆ ಹೊಸ ವೇಗ ಸಿಕ್ಕಂತಾಗಿದೆ.
– ಬಿ.ವೈ.ರಾಘವೇಂದ್ರ, ಸಂಸದ