ಶಿವಮೊಗ್ಗ ಲೈವ್.ಕಾಂ | RAILWAY NEWS | 16 JUNE 2021
ಕರೋನ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲು ಸೇವೆ ಪುನಾರಂಭವಾಗುತ್ತಿದೆ. ಶಿವಮೊಗ್ಗದ ಕೆಲವು ರೈಲುಗಳ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 18ರಿಂದ ಎರಡು ರೈಲುಗಳ ಸಂಚಾರ ಆರಂಭವಾಗಲಿದೆ. ಆದರೆ ಈ ರೈಲುಗಳಿಗೆ ಕೌಂಟರ್‍ನಲ್ಲಿ ಟಿಕೆಟ್ ಸಿಗುವುದಿಲ್ಲ. ಆನ್‍ಲೈನ್ ಮೂಲಕವೆ ಟಿಕೆಟ್ ಕಾಯ್ದಿರಿಸಬೇಕಿದೆ.
ಯಾವೆಲ್ಲ ರೈಲುಗಳ ಸಂಚಾರ ಶುರುವಾಲಿದೆ?
ರೈಲು ಸಂಖ್ಯೆ 06529 – ಬೆಂಗಳೂರಿನಿಂದ ತಾಳಗುಪ್ಪ – ಜೂನ್ 18ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.45ಕ್ಕೆ ಶಿವಮೊಗ್ಗ ತಲುಪಲಿದೆ. ರಾತ್ರಿ 10 ಗಂಟೆಗೆ ತಾಳುಗುಪ್ಪ ನಿಲ್ದಾಣಕ್ಕೆ ರೀಚ್ ಆಗಲಿದೆ.
ರೈಲು ಸಂಖ್ಯೆ 06530 – ತಾಳಗುಪ್ಪದಿಂದ ಬೆಂಗಳೂರು – ಬೆಳಗ್ಗೆ 5 ಗಂಟೆಗೆ ತಾಳಗುಪ್ಪದಿಂದ ಹೊರಟು 7 ಗಂಟೆಗೆ ಶಿವಮೊಗ್ಗಕ್ಕೆ ಬರಲಿದೆ. ಬೆಳಗ್ಗೆ 7.05ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ.
ಜನಶತಾಬ್ದಿ ರೈಲು : ಸಂಜೆ 5.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ.
ಜನಶತಾಬ್ದಿ ರೈಲು : ಬೆಳಗ್ಗೆ 5.15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟು ಬೆಳಗ್ಗೆ 10.15ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 06227 ಮೈಸೂರು ತಾಳಗುಪ್ಪ ಮತ್ತು ರೈಲು ಸಂಖ್ಯೆ 06228 ತಾಳಗುಪ್ಪ ಮೈಸೂರು ರೈಲು ಸಂಚಾರ ಪ್ರತಿದಿನ ಎಂದಿನಂತೆ ಮುಂದುವರೆಯಲಿದೆ.