SHIMOGA , 28 AUGUST 2024 : ಉಂಬ್ಳೆಬೈಲಿನಿಂದ ನಾಟ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ (Raid) ನಡೆಸಿದ್ದಾರೆ. ನಾಲ್ವರು ಆರೋಪಿಗಳು, ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಉಂಬ್ಳೆಬೈಲು ವಲಯದ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಯಿತು. ಸಾರಿಗೆರೆ ಗ್ರಾಮದ ಮಧುಸೂದನ್, ಉಂಬ್ಳೆಬೈಲು ಗ್ರಾಮದ ಕುಮಾರ್, ಕೃಷ್ಣ, ಗಾಜನೂರಿನ ಮೈಲಾರಿ ಎಂಬುವವರನ್ನು ಬಂಧಿಸಲಾಗಿದೆ.
ನಾಟ, ಎರಡು ವಾಹನಗಳು ಸೀಜ್
ಉಂಬ್ಳೆಬೈಲಿನಿಂದ ಗಾಜನೂರಿಗೆ ಸಾಗಿಸಲಾಗುತ್ತಿದ್ದ 6 ಸಾಗುವಾನಿ ನಾಟ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ ಒಂದು ಗೂಡ್ಸ್ ವಾಹನ, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಉಂಬ್ಳೆಬೈಲು ವಲಯದ ಆರ್‌ಎಫ್‌ಒ ಗಿಡ್ಡಸ್ವಾಮಿ, ಡಿಆರ್‌ಎಫ್‌ಒ ಪವನ್ ಮಹೇಂದ್ರಕರ್, ಡಿಆರ್‌ಎಫ್‌ಒ ನಾಗರಾಜ, ಶ್ರೀಕಾಂತ್, ದಿನೇಶ್, ಶಂಕರ ವಲಯ, ಸಕ್ರೆಬೈಲು ವನ್ಯಜೀವಿ ವಲಯದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ದರ್ಶನ್ ಸಹಚರರು ಆಗಮನಕ್ಕು ಮುನ್ನವೆ ಶಿವಮೊಗ್ಗ ಜೈಲಿನ ಮೇಲೆ 120 ಪೊಲೀಸರಿಂದ ದಾಳಿ