ಶಿವಮೊಗ್ಗದ ರೈಲಿಗೂ ವಿಸ್ಟಾಡೋಮ್ ಬೋಗಿ, ಹೇಗಿರುತ್ತೆ? ಯಾವ ರೈಲಿಗೆ ಅಳವಡಿಸಲಾಗುತ್ತೆ?

ಶಿವಮೊಗ್ಗದ ಲೈವ್.ಕಾಂ | SHIMOGA NEWS |  24 ಡಿಸೆಂಬರ್ 2021 ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಮಂಗಳೂರು – ಬೆಂಗಳೂರು ರೈಲಿನ ಮಾದರಿಯಲ್ಲೇ ಶಿವಮೊಗ್ಗದ ಒಂದು ರೈಲಿಗೂ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರು, ಪ್ರಯಾಣಿಕರನ್ನು ಸೆಳೆದಿದ್ದ ವಿಸ್ಟಾಡೋಮ್ ಬೋಗಿ, ಈಗ ಶಿವಮೊಗ್ಗದ ರೈಲೊಂದರಲ್ಲಿ ಅಳವಡಿಸಲಾಗುತ್ತಿದೆ.

AVvXsEjubsOilkhgq8SzYrg6f IdYVyFT33nAzTObPTO7g2mSz1bI1BgniDqmB4x0HK8nFq9AA8jkGiIzpjJBFT6QW sE542jUkz81YOwNkKrn9VhvNWib4U auKCyVAbPTmJGqoC1JFWnN355YeV 7vd8h okX5bUuHGgBqiG1kMPmUapD4rPa2q sp LbzqQ=s926

ಏನಿದು ವಿಸ್ಟಾಡೋಮ್ ಬೋಗಿ?

ವಿಸ್ಟಾಡೋಮ್ ಬೋಗಿಗಳು ಸಾಮಾನ್ಯ ಬೋಗಿಗಳಂತೆ ಇರುವುದಿಲ್ಲ. ಎಸಿ ಸೀಟರ್ ಕೋಚ್ ಬೋಗಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಸಂಪೂರ್ಣವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ದೊಡ್ಡ ಗಾಜಿನ ಕಿಟಕಿ ಇರಲಿದೆ. ಬೋಗಿಗೆ ಗಾಜಿನ ಛಾವಣಿ ಇರಲಿದೆ. ಸೀಟುಗಳು ಕೂಡ ಯಾವುದೆ ದಿಕ್ಕಿಗೆ ತಿರುಗಿಸಲು ಅವಕಾಶವಿರಲಿದೆ.

ಮಂಗಳೂರು – ಬೆಂಗಳೂರು ರೈಲಿನಲ್ಲಿ ಪ್ರಾಯೋಗಿಕವಾಗಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈ ಬೋಗಿಗಳಲ್ಲಿ ಪ್ರಯಾಣಿಸಲು ಭಾರಿ ಡಿಮಾಂಡ್ ಇದೆ. ಈಗ ಶಿವಮೊಗ್ಗದ ರೈಲು ಒಂದಕ್ಕೆ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ನಿರ್ಧಿರಿಸಿದೆ.

ಯಾವ ರೈಲಿಗೆ ವಿಸ್ಟಾಡೋಮ್ ಬೋಗಿ?

ರೈಲು ಸಂಖ್ಯೆ 16579 / 16580 – ಯಶವಂತಪುರ – ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್‌ ಪ್ರೆಸ್‌ ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತಿದೆ. ತಾತ್ಕಾಲಿಕವಾಗಿ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

2021ರ ಡಿಸೆಂಬರ್ 25 ರಿಂದ 2022ರ ಮಾರ್ಚ್ 31ರವರೆಗೆ ಯಶವಂತಪುರ – ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ ಪ್ರೆಸ್‌ ರೈಲು, ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಒಂದು ಎಸಿ ಬೋಗಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT ME NEW FINAL FINAL

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು