ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಎಷ್ಟಿದೆ? ಇವತ್ತು ಎಷ್ಟು ನೀರು ಸಂಗ್ರಹವಾಗಿದೆ?

DAM LEVEL, 4 AUGUST 2024 : ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು ಜಲಾಶಯಗಳ ಒಳ ಹರಿವು ಕುಸಿತ ಕಂಡಿದೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಮತ್ತು ಹೊರ ಹರಿವು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌.

DAM-LEVEL-LINGANAMAKKI-DAM.webpಲಿಂಗನಮಕ್ಕಿ ಜಲಾಶಯದ ಒಳ ಹರಿವು ತುಸು ಇಳಿಕೆಯಾಗಿದೆ. ಇವತ್ತು 36,601 ಕ್ಯೂಸೆಕ್‌ ಇದೆ. 27,780 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಮಟ್ಟ 1819 ಅಡಿ. ಇವತ್ತು 1815.60 ಅಡಿಯಷ್ಟು ನೀರಿನ ಸಂಗ್ರಹವಿದೆ. 140.27 ಟಿಎಂಸಿ ನೀರು ಇದೆ.

DAM-LEVEL-TUNGA-DAM.webpತುಂಗಾ ಜಲಾಶಯದ ಒಳ ಹರಿವು ಕೂಡ ಇಳಿಕೆಯಾಗಿದೆ. ಇವತ್ತು 35,957 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ನೀರಿನ ಮಟ್ಟ ಇಳಿಕೆ ಆಗಿರುವುದರಿಂದ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮಾತ್ರ ಮುಳುಗಿದೆ.

DAM-LEVEL-BHADRA-DAM.webpಭದ್ರಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 19,512 ಕ್ಯೂಸೆಕ್‌ ಒಳ ಹರಿವು ಇದೆ. 29,894 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇಂದಿನ ನೀರಿನ ಮಟ್ಟ 180 ಅಡಿ ಇದೆ. ಪ್ರಸ್ತುತ 64.17 ಟಿಎಂಸಿ ನೀರು ಸಂಗ್ರಹವಾಗಿದೆ. 

Kalleshwara-Enterprises.webp

ಇದನ್ನೂ ಓದಿ ⇓

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆಯಾಗುತ್ತಾ? ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment