ಭದ್ರಾ ಡ್ಯಾಂಗೆ ಒಳ ಹರಿವು ಏರಿಕೆ, ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ತುಸು ಹೆಚ್ಚಳ

SHIVAMOGGA LIVE NEWS | 25 JUNE 2024 (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

DAM LEVEL : ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಬಿರುಸು ಪಡೆಯುತ್ತಿದೆ. ಹಾಗಾಗಿ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಮೂರು ಜಲಾಶಯಗಳ ಪೈಕಿ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಇತ್ತ ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಂಗಳಿಗೆ ಒಳ ಹರಿವು ಪ್ರಮಾಣ ತುಸು ಏರಿಕೆಯಾಗಿದೆ.

ಸಾವಿರ ಕ್ಯೂಸೆಕ್‌ ಒಳ ಹರಿವು

ಭದ್ರಾ ಜಲಾಶಯಕ್ಕೆ ಈತನಕ ಸಣ್ಣ ಪ್ರಮಾಣದ ಒಳ ಹರಿವು ಇತ್ತು. ಹಿನ್ನೀರು ಭಾಗದಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿರುವ ಹಿನ್ನೆಲೆ ಒಳ ಹರಿವು ಸಾವಿರ ಕ್ಯೂಸೆಕ್‌ ಗಡಿ ದಾಟಿದೆ. ಇವತ್ತು ಭದ್ರಾ ಡ್ಯಾಂಗೆ 1419 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟ 119.7 ಅಡಿಗೆ ತಲುಪಿದೆ.

ಲಿಂಗನಮಕ್ಕಿ ಒಳ ಹರಿವೂ ಏರಿಕೆ

ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕೂಡ ಏರಿಕೆಯಾಗುತ್ತಿದೆ. ಇವತ್ತು ಜಲಾಶಯಕ್ಕೆ 3862 ಕ್ಯೂಸೆಕ್‌ ಒಳ ಹರಿವು ಇದೆ. ಸದ್ಯ ಜಲಾಶಯದ ನೀರಿನ ಮಟ್ಟ 1744.85 ಅಡಿಗೆ ತಲುಪಿದೆ. ಕಳೆದ 24 ಗಂಟೆಗೆಯಲ್ಲಿ ನೀರಿನ ಮಟ್ಟ 0.25 ಅಡಿಯಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ – ಗಾಳಿ, ಮಳೆ, ಮರ ಉರುಳಿ ಮನೆ ಸಂಪೂರ್ಣ ಜಖಂ

Bhadra-Dam-General-Image

Leave a Comment