SHIVAMOGGA LIVE NEWS | 18 JUNE 2024➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಸಾಗರ, ಹೊಸನಗರ ತಾಲೂಕು ಹೊರತು ಉಳಿದೆಲ್ಲು ದೊಡ್ಡ ಪ್ರಮಾಣದ ಮಳೆಯಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಜೂ.17ರ ಬೆಳಗ್ಗೆ 8.30ರಿಂದ ಜೂ.18ರ ಬೆಳಗ್ಗೆ 8.30ರವರೆಗಿನ ಮಳೆ ಪ್ರಮಾಣವನ್ನು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಭದ್ರಾವತಿಯಲ್ಲಿ 0.2 ಮಿ.ಮೀ, ಹೊಸನಗರದಲ್ಲಿ 2.4 ಮಿ.ಮೀ, ಸಾಗರದಲ್ಲಿ 9 ಮಿ.ಮೀ, ಶಿಕಾರಿಪುರದಲ್ಲಿ 0.6 ಮಿ.ಮೀ, ಶಿವಮೊಗ್ಗದಲ್ಲಿ 0.3 ಮಿ.ಮೀ, ಸೊರಬದಲ್ಲಿ 0.1 ಮಿ.ಮೀ, ತೀರ್ಥಹಳ್ಳಿಯಲ್ಲಿ 0.4 ಮಿ.ಮೀ ಮಳೆಯಾಗಿದೆ.
ವಾಡಿಕೆಗಿಂತಲೂ ಕಡಿಮೆ ಮಳೆ
ಜೂನ್ 1 ರಿಂದ ಜೂನ್ 17ರವರೆಗೆ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.
| ತಾಲೂಕು | ವಾಡಿಕೆ ಮಳೆ | ವಾಸ್ತವದ ಮಳೆ |
| ಭದ್ರಾವತಿ | 56.3 ಮಿ.ಮೀ | 44.7 ಮಿ.ಮೀ |
| ಹೊಸನಗರ | 339.5 ಮಿ.ಮೀ | 165.8 ಮಿ.ಮೀ |
| ಸಾಗರ | 233 ಮಿ.ಮೀ | 280 ಮಿ.ಮೀ |
| ಶಿಕಾರಿಪುರ | 83.2 ಮಿ.ಮೀ | 67 ಮಿ.ಮೀ |
| ಶಿವಮೊಗ್ಗ | 65.1 ಮಿ.ಮೀ | 55.1 ಮಿ.ಮೀ |
| ಸೊರಬ | 136.3 ಮಿ.ಮೀ | 70.5 ಮಿ.ಮೀ |
| ತೀರ್ಥಹಳ್ಳಿ | 256 ಮಿ.ಮೀ | 133.2 ಮಿ.ಮೀ |
ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?