SHIVAMOGGA LIVE NEWS | 22 JULY 2024➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
RAINFALL NEWS : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಜು.21ರ ಬೆಳಗ್ಗೆ 8.30 ರಿಂದ ಜು.22ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಸರಾಸರಿ 29.61 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ ತಾಲೂಕಿನಲ್ಲಿ 6.70 ಮಿ.ಮೀ ಮಳೆಯಾಗಿದೆ. ಭದ್ರಾವತಿ 7.50 ಮಿ.ಮೀ, ತೀರ್ಥಹಳ್ಳಿ 36.10 ಮಿ.ಮೀ, ಸಾಗರ 57 ಮಿ.ಮೀ, ಶಿಕಾರಿಪುರ 20.80 ಮಿ.ಮೀ, ಸೊರಬ 39.40 ಮಿ.ಮೀ, ಹೊಸನಗರದಲ್ಲಿ 39.80 ಮಿ.ಮೀ ಮಳೆಯಾಗಿದೆ.