ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ, ಸೆಖೆ ಮುಂದುವರೆದಿದೆ. ಧಗೆಯಿಂದಾಗಿ ಜನ ಹೈರಣಾಗಿದ್ದಾರೆ. ಇವತ್ತೂ ಇದೇ ವಾತಾವರಣ ಇರುವ ಸಾಧ್ಯತೆ ಇದೆ. ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ತುಂತುರು ಅಥವಾ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಇಲ್ಲಿದೆ ತಾಲೂಕುವಾರು ಹವಾಮಾನ ವರದಿ
ಶಿವಮೊಗ್ಗ, ಭದ್ರಾವತಿ: ತಾಲೂಕುಗಳಲ್ಲಿ ಗರಿಷ್ಠ 38°C ಮತ್ತು ಕನಿಷ್ಠ 22°C ತಾಪಮಾನ ದಾಖಲಾಗಲಿದೆ. ಬಿಸಿಲು ಮತ್ತು ತೀವ್ರ ಸೆಖೆಯ ವಾತಾವರಣ.

ತೀರ್ಥಹಳ್ಳಿ: ಇವತ್ತು ಗರಿಷ್ಠ 36°C ಹಾಗೂ ಕನಿಷ್ಠ 20°C ತಾಪಮಾನ ದಾಖಲಾಗಲಿದೆ. ಸಾಧಾರಣ ಸೆಖೆ. ಭಾಗಶಃ ಬಿಸಿಲಿನ ವಾತಾವರಣ.
ಹೊಸನಗರ: ಇಂದು ಗರಿಷ್ಠ 37°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ಬಿಸಿಲು ಮತ್ತು ಮೋಡದ ವಾತಾವರಣ.
ಸಾಗರ: ಈ ದಿನ ಗರಿಷ್ಠ 34°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ಮೋಡದ ವಾತಾವರಣ. ಬಿಸಿಲಿನ ಅಬ್ಬರ.
ಶಿಕಾರಿಪುರ: ಇಂದು ಗರಿಷ್ಠ 39°C ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಕನಿಷ್ಠ 21°C ತಾಪಮಾನವಿರಲಿದೆ. ಬಿಸಿಲ ಧಗೆ ಇಲ್ಲಿ ತೀವ್ರವಾಗಿ ಇರಲಿದೆ. ಸೊರಬ: ತಾಲೂಕಿನಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮೋಡಗಳು ಕಾಣಿಸಿಕೊಳ್ಳಬಹುದು. ಬಿಸಿಲಿನ ಅಬ್ಬರ ಹೆಚ್ಚಿರಲಿದೆ.


