ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಭಾರಿ ಬಿಸಿಲು, ವಿಪರೀತ ಸೆಖೆ (Humidity) ಇರಲಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ (Cloudy weather) ಇರಲಿದೆ. ಆದರೆ ಮಳೆ ಸುರಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? (Temperature)
ಶಿವಮೊಗ್ಗ, ಭದ್ರಾವತಿ: ಎರಡೂ ತಾಲೂಕುಗಳಲ್ಲಿ ಇವತ್ತು ಗರಿಷ್ಠ (Maximum) 38°C ಮತ್ತು ಕನಿಷ್ಠ (Minimum) 23°C ತಾಪಮಾನ ಇರಲಿದೆ. ಬಿಸಿಲ ಧಗೆ (Heatwave condition) ಜೋರಿರಲಿದೆ.

ತೀರ್ಥಹಳ್ಳಿ: ಗರಿಷ್ಠ 36°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಸೆಖೆಯ ಅನುಭವ.
ಹೊಸನಗರ: ಇಂದು ಗರಿಷ್ಠ 37°C ಮತ್ತು ಕನಿಷ್ಠ 21°C ತಾಪಮಾನ ಇರಲಿದೆ. ಪ್ರಖರ ಬಿಸಿಲು (Scorching sun).
ಸಾಗರ: ಇವತ್ತು ಗರಿಷ್ಠ 33°C ಮತ್ತು ಕನಿಷ್ಠ 22°C ತಾಪಮಾನವಿರಲಿದೆ. ಮೋಡ ಇರಲಿದೆ. ಬಿಸಿಲ ತೀವ್ರತೆಯು ಇರಲಿದೆ.
ಶಿಕಾರಿಪುರ: ಇವತ್ತು ತಾಪಮಾನ ಗರಿಷ್ಠ 39°C ಗೆ ತಲುಪುವ ಸಾಧ್ಯತೆ ಇದೆ. ಕನಿಷ್ಠ 22°C ದಾಖಲಾಗಲಿದೆ. ಸುಡುಬಿಸಿಲು. ಮೋಡದ ವಾತಾವರಣ (Overcast) ಸಂಭವ.
ಸೊರಬ: ಈ ದಿನ ಗರಿಷ್ಠ 38°C ಹಾಗೂ ಕನಿಷ್ಠ 22°C ತಾಪಮಾನ ದಾಖಲಾಗಲಿದೆ. ಬಿಸಿಲಿನ ಅಬ್ಬರ.
