ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆ ಸಾಧ್ಯತೆ, ಉಳಿದೆಡೆ ಹೇಗಿರುತ್ತೆ ಹವಾಮಾನ?

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಬಿಸಿಲು ಮುಂದುವರಿಯಲಿದೆ. ಸೋಮವಾರ ವಿವಿಧೆಡೆ ಮಳೆಯಾಗಿದ್ದರೂ (Rainfall) ತಾಪಮಾನ ತಗ್ಗಿಲ್ಲ. ಸೆಖೆಯು ಹೆಚ್ಚಿರಲಿದೆ. ಇನ್ನೊಂದೆಡೆ ಇವತ್ತು ಅಲ್ಲಲ್ಲಿ ಮೋಡ ಕವಿದ ವಾತಾವರಣ (Cloudy weather) ಇರಲಿದ್ದು, ಮಳೆಯಾಗುವ ಸಾಧ್ಯತೆಯು (Rain forecast) ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

  • ಶಿವಮೊಗ್ಗ, ಭದ್ರಾವತಿ: ಇಂದು ಗರಿಷ್ಠ 37°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಬಿಸಿಲಿನ ವಾತಾವರಣ ಮುಂದುವರಿಯಲಿದೆ.
  • ತೀರ್ಥಹಳ್ಳಿ: ಇಂದು ಗರಿಷ್ಠ 35°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಭಾಗಶಃ ಮೋಡ ಕವಿದ ವಾತಾವರಣ (Partly cloudy) ಇದ್ದರೂ ಬಿಸಿಲಿನ ತೀವ್ರತೆ ಇರಲಿದೆ.
  • ಹೊಸನಗರ: ಈ ದಿನ ಗರಿಷ್ಠ 36°C ಮತ್ತು ಕನಿಷ್ಠ 21°C ತಾಪಮಾನ ಇರಲಿದ್ದು, ಅಧಿಕ ಸೆಖೆ (Humidity) ಇರಲಿದೆ.
  • ಸಾಗರ: ಗರಿಷ್ಠ 33°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಮೋಡ ಮತ್ತು ಬಿಸಿಲಿನ ಮಿಶ್ರ ವಾತಾವರಣ ಇರಲಿದೆ.
  • ಶಿಕಾರಿಪುರ: ಇಂದು 38°C ಗರಿಷ್ಠ ಹಾಗೂ 22°C ಕನಿಷ್ಠ ಉಷ್ಣಾಂಶವಿರಲಿದೆ (Maximum temperature). ಇಲ್ಲಿ ತೀವ್ರ ಸೆಖೆ ಇರಲಿದೆ.
  • ಸೊರಬ: ಇವತ್ತು ಗರಿಷ್ಠ 37°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಮೋಡ ಮತ್ತು ಬಿಸಿಲಿನ ವಾತಾವರಣ ಇರಲಿದೆ.
Shivamogga-Weather-Report
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion