ಶಿವಮೊಗ್ಗ ಲೈವ್
SHIVAMOGGA LIVE NEWS | 15 APRIL 2024
WEATHER REPORT : ವಿವಿಧೆಡೆ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ತಾಪಮಾನ ಕಡಿಮೆಯಾಗಿತ್ತು. ಥಂಡಿ ವಾತಾವರಣ ಇತ್ತು. ಆದರೆ ಇವತ್ತು ಪುನಃ ಸೂರ್ಯ ತನ್ನ ಪ್ರಖರತೆ ತೋರಿಸಲಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?
ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 5.30ರ ಹೊತ್ತಿಗೆ 22.68 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಬೆಳಗ್ಗೆ 8.30ಕ್ಕೆ 28.14 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ. ಬೆಳಗ್ಗೆ 11.30ಕ್ಕೆ 35.58 ಡಿಗ್ರಿ ಸೆಲ್ಸಯಸ್, ಮಧ್ಯಾಹ್ನ 2.30ರ ಹೊತ್ತಿಗೆ 38.34 ಡಿಗ್ರಿ ಸೆಲ್ಸಿಯಸ್, ಸಂಜೆ 5.30ಕ್ಕೆ 37.4 ಡಿಗ್ರಿ ಸೆಲ್ಸಿಯಸ್, ರಾತ್ರಿ 10.30ಕ್ಕೆ 28.4 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಗಾಳಿ, ಮಳೆಗೆ ಉರುಳಿದ ಮರ, ವಿನೋಬನಗರದಲ್ಲಿ ವಿದ್ಯುತ್ ಕಡಿತ