ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಸುರಿಯಲಿದೆ ಮಳೆ, ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಹವಾಮಾನ ವರದಿ: ಶನಿವಾರದ ಮಳೆಯಿಂದಾಗಿ (Rainfall) ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ (Temperature) ತಗ್ಗಿದೆ. ವಾತಾವರಣ ತುಸು ತಂಪಾಗಿದ್ದು, ಜನರಿಗೆ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಕ್ಕಿದೆ. ಇನ್ನೊಂದೆಡೆ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು (Meteorologists / Weather Experts) ಅಂದಾಜಿಸಿದ್ದಾರೆ. ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ (Rain forecast) ನೀಡಲಾಗಿದೆ.

➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಇವತ್ತು ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?

ಶಿವಮೊಗ್ಗ, ಭದ್ರಾವತಿ: ತಾಲೂಕಿನಲ್ಲಿ ಇಂದು ಗರಿಷ್ಠ 34°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಮೋಡ ಕವಿದ ವಾತಾವರಣ. ಭಾರಿ ಮಳೆಯಾಗುವ ಸಾಧ್ಯತೆ ಇದೆ.

Shivamogga-Weather-Report

ತೀರ್ಥಹಳ್ಳಿ: ತಾಲೂಕಿನಲ್ಲಿ ಇಂದು ಗರಿಷ್ಠ 32°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಸ್ವಲ್ಪ ಸಮಯ ಬಿಸಿಲು. ಮೋಡ ಕವಿದ ವಾತಾವರಣ. ಭಾರಿ ಮಳೆಯಾಗುವ ಸಾಧ್ಯತೆ.

ಹೊಸನಗರ: ತಾಲೂಕಿನಲ್ಲಿ ಇಂದು ಗರಿಷ್ಠ 31°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಸೆಖೆಯ ವಾತಾವರಣ. ಮೋಡ ಕವಿಯಲಿದೆ. ಗುಡುಗು, ಗಾಳಿ ಸಹಿತ ಸಾಧಾರಣ ಮಳೆ.

ಸಾಗರ: ತಾಲೂಕಿನಲ್ಲಿ ಇಂದು ಗರಿಷ್ಠ 30°C ಮತ್ತು ಕನಿಷ್ಠ 23°C ತಾಪಮಾನ ಇರಲಿದೆ. ಸೆಖೆ ವಾತಾವರಣ. ಬಿಸಿಲು, ಮೋಡ ಇರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ.

ಶಿಕಾರಿಪುರ: ತಾಲೂಕಿನಲ್ಲಿ ಇಂದು ಗರಿಷ್ಠ 35°C ಮತ್ತು ಕನಿಷ್ಠ 23°C ತಾಪಮಾನ ಇರಲಿದೆ. ಬಿಸಿಲು ಮತ್ತು ಮೋಡ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಸೊರಬ: ತಾಲೂಕಿನಲ್ಲಿ ಇಂದು ಗರಿಷ್ಠ 36°C ಮತ್ತು ಕನಿಷ್ಠ 24°C ತಾಪಮಾನ ಇರಲಿದೆ. ಮೋಡ ಮತ್ತು ಸಾಧಾರಣ ಮಳೆ.