ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 2 APRIL 2024
WEATHER REPORT : ಜಿಲ್ಲೆಯಲ್ಲಿ ಬಿಸಿಲಿನ ತಾಪ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಇವತ್ತು ಕೂಡ ಶಿವಮೊಗ್ಗದಲ್ಲಿ ಮೈಸುಡುವ ಬಿಸಿಲಿರಲಿದೆ. ಇವತ್ತು ಗರಿಷ್ಠ ತಾಪಮಾನ 40 ಡಿಗ್ರಿ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಳಗ್ಗೆ 5.30ರ ಹೊತ್ತಿಗೆ 22 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಮಧ್ಯಾಹ್ನ 2.30ರ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಈ ಹೊತ್ತಿಗೆ 40.45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ರಾತ್ರಿ 11.30ರ ಹೊತ್ತಿಗೆ 23 ಡಿಗ್ರಿ ಸೆಲ್ಸಿಯಸ್ ತಲುಪಲಿದೆ.
ಬಿಸಿಲ ಧಗೆ ಮತ್ತಷ್ಟು ಏರಿಕೆ
ಇನ್ನು, ಮುಂದಿನ ಹಲವು ದಿನ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲಿನ ಧಗೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇಶದ ದಕ್ಷಿಣ, ಉತ್ತರ, ಕೇಂದ್ರ ಭಾಗದಲ್ಲಿ ಉಷ್ಣ ಹವೆ ಹೆಚ್ಚಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ಮಧ್ಯ ಪ್ರದೇಶದಲ್ಲಿ ಸಮಾನ್ಯಕ್ಕಿಂತಲು ಹೆಚ್ಚಿನ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ – ಸೊರಬದಲ್ಲಿ ರಂಭಾಪುರಿ ಶ್ರೀ, ಆಂತರಿಕ ಬದುಕು ಪರಿಶುದ್ಧಿ ಕುರಿತು ಸಂದೇಶ, ಏನದು?






