ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ತಪಾಮಾನವು ಇಳಿಕೆಯಾಗಿದೆ. ಇದರ ಬೆನ್ನಿಗೆ ಥಂಡಿ ಹೆಚ್ಚಾಗಿದೆ. (Weather Report)
ಕಳೆದ ಎರಡು ದಿನದಿಂದ ಅಬ್ಬರಿಸಿದ್ದ ವರುಣ ತಣ್ಣಗಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಮಳೆ ಕಡಿಮೆಯಾಗಿದೆ. ಇನ್ನು, ತಾಪಮಾನ ಇಳಿಕೆಯಾಗಿದೆ. ಇದರಿಂದಾಗಿ ಥಂಡಿ ಹೆಚ್ಚಾಗಿದೆ. ರಾತ್ರಿ ವೇಳೆ ಮೈ ಕೊರೆಯುವ ಚಳಿ ಇದೆ.

ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
- ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
- ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
- ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಎಲ್ಲ ಗೇಟುಗಳು ಓಪನ್
Shimoga Weather Report 20 August 2025
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
