ಯಡಿಯೂರಪ್ಪ ಅಭಿಮಾನೋತ್ಸವ, ಶಿವಮೊಗ್ಗದಲ್ಲಿ ಪೂರ್ವಭಾವಿ ಸಭೆ, ರಾಘವೇಂದ್ರ ಏನೆಲ್ಲ ಹೇಳಿದರು?

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Yediyurappa) ಅವರ ಸಾರ್ವಜನಿಕ ಜೀವನದ 50 ಸಾರ್ಥಕ ವರ್ಷಗಳ ಸಂಭ್ರಮದ (celebration) ಅಂಗವಾಗಿ ಮೇ 9ರಂದು ನಗರದಲ್ಲಿ ಬೃಹತ್ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ, ದಶಕಗಳ ಕಾಲ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್‌.ಯಡಿಯೂರಪ್ಪ ಅವರ ಸಾಧನೆಯನ್ನು ಸ್ಮರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

BY-Raghavendra-spoke-at-Yedyurappa-abhimanotsava-meeting.

ಕಾರ್ಯಕ್ರಮದ ವಿಶೇಷತೆಗಳೇನು? ರಾಘವೇಂದ್ರ ಏನಂದ್ರು?

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
  • ಕಾರ್ಯಕ್ರಮಕ್ಕಾಗಿ 100 ಎಕರೆ ಜಾಗದಲ್ಲಿ ಪೆಂಡಾಲ್ ಹಾಗೂ 200 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ.
  • ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ.
  • ಮೇ 8ರಂದು ಬಿ.ಎಸ್. ಯಡಿಯೂರಪ್ಪ ಅವರ ಭವ್ಯ ಪುರಪ್ರವೇಶ ಮೆರವಣಿಗೆ ನಡೆಯಲಿದೆ.
BY-Raghavendra-spoke-at-Yedyurappa-abhimanotsava-celebration-meeting.

ಯಡಿಯೂರಪ್ಪ ಅವರ ಇಚ್ಛಾಶಕ್ತಿಯಿಂದ ಶಿವಮೊಗ್ಗ ಜಿಲ್ಲೆಯ ಚಹರೆಯೇ ಬದಲಾಗಿದೆ. ಅವರ ಅಭಿವೃದ್ಧಿ ತುಡಿತದ ಫಲವಾಗಿ ಜಿಲ್ಲೆ ಇಂದು ಈ ಮಟ್ಟಕ್ಕೆ ಬೆಳೆದಿದೆ. ಅವರ 50 ವರ್ಷಗಳ ಸಾರ್ಥಕ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

– ಬಿ.ವೈ. ರಾಘವೇಂದ್ರ, ಸಂಸದರು.

ಸಭೆಯಲ್ಲಿ ಪ್ರಮುಖರಾದ ನಟರಾಜ್ ಭಾಗವತ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಮಾಜಿ ಶಾಸಕ ಎಸ್. ರುದ್ರೇಗೌಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕೇಂದ್ರ ಸರ್ಕಾರದ ಸಮಿತಿಗೆ ಸಂಸದ ರಾಘವೇಂದ್ರ ಮರು ನೇಮಕ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು