ನಾಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ, ಕಾರಣವೇನು?

220424 Chief Minister Siddaramaiah visit to Shimoga airport

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 1ರಂದು ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದ (Shivamogga Airport) ಮೂಲಕ ಜಿಲ್ಲೆಗೆ ಆಗಮಿಸಿ, ನಂತರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ ಬೆಳಗ್ಗೆ 11ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ (VT-SNP) ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 11.50ಕ್ಕೆ ಶಿವಮೊಗ್ಗದ ಸೋಗಾನೆ ಬಳಿಯ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗದ … Read more

ಸಿಎಂಗೆ ಡಿಸಿಎಂ ಪತ್ರ, ಶಿವಮೊಗ್ಗದ ಇಬ್ಬರ ಹೆಸರು ಪ್ರಸ್ತಾಪ, ಆಕಾಂಕ್ಷಿಗಳಿಗೆ ನಿರಾಸೆ, ಏನಿದೆ ಪತ್ರದಲ್ಲಿ?

dk-Shivakumar-in-Shivamogga-helipad

ಬೆಂಗಳೂರು: ರಾಜ್ಯದ ಯೋಜನಾ ಪ್ರಾಧಿಕಾರಿಗಳು ಮತ್ತು ಕಾಡಾ ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ಅವಧಿಯನ್ನು ಮುಂದುವರೆಸಿ, ಆದೇಶ ಹೊರಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್‌ ಆಗಿದೆ. ಡಿಸಿಎಂ ಬರೆದ ಪತ್ರದಲ್ಲಿ ಏನಿದೆ? 2024ರ ಫೆಬ್ರವರಿ 28ರಂದು ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ನಿಗಮ ಮಂಡಳಿಗಳಿಗೆ ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರುಗಳನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 7ರಂದು ಹೊರಡಿಸಲಾದ ಆದೇಶದ … Read more

ಶಿವಮೊಗ್ಗದ ಜಾತ್ರೆಯಿಂದ ರಾತ್ರಿ ಹಾರನಹಳ್ಳಿಯ ಮನೆಗೆ ಬಂದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?

Kumsi-Police-Station-Shimoga

ಕುಂಸಿ: ಹಾರನಹಳ್ಳಿ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ₹15 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು (gold and silver) ಹಾಗೂ ನಗದು ದೋಚಿದ್ದಾರೆ. ಈ ಸಂಬಂಧ ಹಾರನಹಳ್ಳಿಯ ಈಶ್ವರ್‌ ಎಂಬುವವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ‍ಶ್ವರ ಅವರು ಕುಟುಂಬದೊಂದಿಗೆ ಫೆಬ್ರವರಿ 24ರಂದು ಸಂಜೆ 5:30ಕ್ಕೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಶಿವಮೊಗ್ಗದ ಮಾರಿಕಾಂಬ ಜಾತ್ರೆಗೆ ತೆರಳಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಹಿಂತಿರುಗಿದಾಗ, ಮನೆಯ ಬಾಗಿಲನ್ನು … Read more

ಶಿವಮೊಗ್ಗದ ರೈಲಿನಲ್ಲಿ ಚಾಕು ತೋರಿಸಿ ಮೊಬೈಲ್‌ ದರೋಡೆ ಕೇಸ್‌, ಇಬ್ಬರು ಆರೆಸ್ಟ್‌, ಏನಿದು ಪ್ರಕರಣ?

Two-Nabbed-by-Railway-Police-in-Shimoga

ಶಿವಮೊಗ್ಗ: ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ (Express train) ಪ್ರಯಾಣಿಕರೊಬ್ಬರನ್ನು ಚಾಕು ತೋರಿಸಿ ಬೆದರಿಸಿ ಮೊಬೈಲ್ ದೋಚಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಫೆಬ್ರವರಿ 11ರಂದು ರಾತ್ರಿ 12.20ಕ್ಕೆ ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16582) ರೈಲು ಶಿವಮೊಗ್ಗದ ವಿದ್ಯಾನಗರದ ನಿಲ್ದಾಣದ ಬಳಿ ಚಲಿಸುತ್ತಿದ್ದಾಗ ಈ ಕೃತ್ಯ ನಡೆದಿತ್ತು. ಎಸ್‌-9 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿದ ದುಷ್ಕರ್ಮಿಯು, ₹17,000 ಮೌಲ್ಯದ ಮೊಬೈಲ್ … Read more

ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ತುಸು ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗದಲ್ಲಿ ಇವತ್ತು ಬಿಸಿಲಿನ ಅಬ್ಬರ ಇರಲಿದೆ. ಶುಕ್ರವಾರಕ್ಕೆ ಹೋಲಿಸಿದರೆ ಇವತ್ತು ತಾಪಮಾಣ ತುಸು ಹೆಚ್ಚಳವಾಗಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ? ಇಲ್ಲಿದೆ ಡಿಟೇಲ್ಸ್‌ (weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 35 19 ಭದ್ರಾವತಿ 35 19 ತೀರ್ಥಹಳ್ಳಿ 33 17 ಸಾಗರ 31 18 ಹೊಸನಗರ 34 18 ಸೊರಬ 36 18 ಶಿಕಾರಿಪುರ 36 19 ಮೂಲ: accuweather ಇದನ್ನೂ ಓದಿ – ಸೂಳೆಬೈಲು, ಊರುಗಡೂರಿನಲ್ಲಿ ಮೇಣದ ಬತ್ತಿ … Read more

₹82,00,15,712 ವಂಚನೆ, ದೇಶಾದ್ಯಂತ 352 ಕೇಸ್‌, ಶಿವಮೊಗ್ಗದಲ್ಲಿ 3 ಅರೆಸ್ಟ್‌, ಕೋಟಿ ಕೋಟಿ ಮೋಸ ಹೇಗಾಯ್ತು?

Three-nabbed-by-cyber-crime-police-for-Mule-Account

ಶಿವಮೊಗ್ಗ: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಅವುಗಳನ್ನು ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಮಟ್ಟದ ಜಾಲವನ್ನು (cyber fraud gang) ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಕೋಟ್ಯಂತರ ರೂಪಾಯಿ ವಂಚನೆಯ ದಂಧೆ ಬೆಳಕಿಗೆ ಬಂದಿದೆ. ವಿಲ್ಸನ್.ವಿ ಎಂಬುವವರಿಗೆ ಕಮಿಷನ್ ಆಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿತ್ತು. ನಂತರ ಆರೋಪಿ ಜಗದೀಶ ಎಂಬಾತ ವಿಲ್ಸನ್ ಅವರಂತೆ ನಟಿಸಿ, ಆ ಖಾತೆಯನ್ನು ಲಕ್ಷಾಂತರ ರೂಪಾಯಿ ವಂಚನೆಯ … Read more

ಶಿಕಾರಿಪುರದ 28 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ, ₹35,000 ದಂಡ, ಕಾರಣವೇನು?

Shivamogga-court-order-for-life-time-imprisonment.

ಶಿವಮೊಗ್ಗ: ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ಮಂಜುನಾಯ್ಕ್ (28) ಎಂಬಾತನಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಹಾಗೂ ₹35,000 ದಂಡ ವಿಧಿಸಿ ಆದೇಶಿಸಿದೆ. ಏನಿದು ಪ್ರಕರಣ? ಶಂಕರ್‌ ನಾಯ್ಕ್‌ ಎಂಬುವವರ ಪತ್ನಿ ಜೊತೆಗೆ ಮಂಜುನಾಯ್ಕ್‌ ಸಲುಗೆಯಿಂದ ಇದ್ದ. ಇದಕ್ಕೆ ಶಂಕರ್‌ ನಾಯ್ಕ್‌ ಆಡ್ಡಿ ಆಗುವ ಹಿನ್ನೆಲೆ ಅವರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ. 2023ರ ಆಗಸ್ಟ್ 27ರಂದು … Read more

ಇವತ್ತು ದ್ವಾದಶಿ, ಪುನರ್ವಸು ನಕ್ಷತ್ರದ ದಿನ, ಇಲ್ಲಿದೆ ಇಂದಿನ ಪಂಚಾಂಗ

Indina-Panchanga-today Panchanga

ದಿನ ಪಂಚಾಂಗ: ಇವತ್ತು 2026ರ ಫೆಬ್ರವರಿ 28. ಶಿವಮೊಗ್ಗದಲ್ಲಿ ಇವತ್ತು 6.45ಕ್ಕೆ ಸೂರ್ಯೋದಯ. 6.36ಕ್ಕೆ ಸೂರ್ಯಾಸ್ತವಾಗಲಿದೆ. ದ್ವಾದಶಿ, ಪುನರ್ವಸು ನಕ್ಷತ್ರದ ದಿನ. (Panchanga) ಮುಂಜಾನೆ 5:08 ರಿಂದ 5:56 ರವರೆಗೆ ಬ್ರಹ್ಮ ಮುಹೂರ್ತ. ದಿನದ ಪ್ರಾತಃ ಸಂಧ್ಯಾ ಸಮಯವು 5:32 ರಿಂದ 6:45 ರವರೆಗೆ ಇರಲಿದೆ. ಮುಂಜಾನೆ 6:45 ರಿಂದ 9:35 ರವರೆಗೆ ತ್ರಿಪುಷ್ಕರ ಯೋಗದ ಶುಭ ಫಲವಿದೆ. ಮುಂಜಾನೆ 7:18 ರಿಂದ 8:49 ರವರೆಗೆ ಅಮೃತ ಕಾಲ. ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:17 ರಿಂದ 1:04 ರವರೆಗೆ … Read more

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? | 27 ಫೆಬ್ರವರಿ 2026

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಸರಕು 61500 95050 ಬೆಟ್ಟೆ 54119 65609 ರಾಶಿ 48199 56359 ಗೊರಬಲು 20199 39599 ಇದನ್ನೂ ಓದಿ – ಶಿವಮೊಗ್ಗದ JNN ಕಾಲೇಜಿನಲ್ಲಿ ಐಟಿ ಬಿಯಾಂಡ್‌ ಬೆಂಗಳೂರು, ಏನಿದು ಕಾರ್ಯಕ್ರಮ? ತೀರ್ಥಹಳ್ಳಿ ಮಾರುಕಟ್ಟೆ ಇತರೆ 30000 51332 ಭದ್ರಾವತಿ ಮಾರುಕಟ್ಟೆ ಇತರೆ 23300 26600 ಚೂರು 11600 20000 ಸಿಪ್ಪೆಗೋಟು 11000 11000 ಶಿಕಾರಿಪುರ ಮಾರುಕಟ್ಟೆ ರಾಶಿ … Read more

ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್‌ ಮಿಸ್ಸಿಂಗ್‌, ಆಗಿದ್ದೇನು?

bike theft reference image

ಶಿವಮೊಗ್ಗ: ನಗರದ ರವೀಂದ್ರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ (Yamaha bike) ಒಂದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ರವೀಂದ್ರನಗರ 6ನೇ ಕ್ರಾಸ್ ನಿವಾಸಿ ಸಂದೀಪ್ ಕೆ.ಬಿ. ಎಂಬುವವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಅವರು ಫೆಬ್ರವರಿ 15ರಂದು ರಾತ್ರಿ 8 ಗಂಟೆಗೆ ಕೆಲಸ ಮುಗಿಸಿ ತಮ್ಮ ಯಮಹಾ ಬೈಕನ್ನು ರವೀಂದ್ರನಗರದ ಮನೆ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದರು. ಮರುದಿನ ಮಧ್ಯಾಹ್ನ 2 ಗಂಟೆಗೆ ಬಂದು ನೋಡಿದಾಗ ಬೈಕ್ … Read more