ಶಿವಮೊಗ್ಗ ಜಿಲ್ಲೆಯ 3 ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್, ಯಾವ ಕ್ಷೇತ್ರ? ಯಾರೆಲ್ಲ ಅಭ್ಯರ್ಥಿಗಳು?

SHIVAMOGGA LIVE NEWS | 19 DECEMBER 2022

ಶಿವಮೊಗ್ಗ : ವಿಧಾನ ಸಭೆ ಚುನಾವಣೆಯ ಅಭ್ಯರ್ಥಿಗಳ (jds candidates) ಮೊದಲ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 93 ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.

Shimoga Nanjappa Hospital

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿ ಕ್ಷೇತ್ರಕ್ಕೆ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ, ತೀರ್ಥಹಳ್ಳಿ ಕ್ಷೇತ್ರಕ್ಕೆ ರಾಜಾರಾಮ್ ಅವರ ಹೆಸರನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಭದ್ರಾವತಿ – ಯಾರೆ ಗೆದ್ದರು ಇಲ್ಲಿ ಜನರ ಬೇಡಿಕೆ ಒಂದೇ

(jds candidates)

jds candidates

ಗೊಂದಲವಿಲ್ಲದ ಕ್ಷೇತ್ರಗಳು

ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಅಭ್ಯರ್ಥಿಯನ್ನು (jds candidates) ಕಣಕ್ಕಿಳಿಸುವ ವಿಚಾರದಲ್ಲಿ ಯಾವುದೆ ಗೊಂದಲಗಳು ಇರಲಿಲ್ಲ. ಮೂರು ಕ್ಷೇತ್ರದಲ್ಲಿ ಈಗಾಗಲೇ ಇವರೆ ಅಭ್ಯರ್ಥಿಗಳು ಎಂಬುದು ಜನರಿಗೆ ತಿಳಿದಿತ್ತು. ಶಾರದಾ ಪೂರ್ಯಾನಾಯ್ಕ್, ಶಾರದಾ ಅಪ್ಪಾಜಿಗೌಡ ಮತ್ತು ರಾಜಾರಾಮ್ ಅವರು ಈಗಾಗಲೆ ಪ್ರಚಾರವನ್ನು ಆರಂಭಿಸಿದ್ದರು. ಈಗ ಅಧಿಕೃತವಾಗಿ ಅವರ ಹೆಸರು ಪ್ರಕಟಗೊಂಡಿದೆ.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಗ್ರಾಮಾಂತರ – 2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು ನಿರ್ಧಾರವಾಗಿತ್ತು

ಶಿವಮೊಗ್ಗ ಸೇರಿ ಉಳಿದೆಡೆ ಕುತೂಹಲ

2013ರಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಮೂವರು ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಅಲ್ಲದೆ ಪಕ್ಷ ಸಂಘಟನೆಯು ಆಗಿತ್ತು. ಆದರೆ ಈ ಬಾರಿ ಶಿಕಾರಿಪುರ, ಸೊರಬದಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ. ಶಿವಮೊಗ್ಗ ನಗರದಿಂದ ಎಂ.ಶ್ರೀಕಾಂತ್ ಅವರನ್ನು ಕಣಕ್ಕಿಳಿಸಬೇಕು ಎಂಬುದು ಕಾರ್ಯಕರ್ತರ ಬಯಕೆ. ಆದರೆ ಮೊದಲ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಇದು ಕುತೂಹಲಕ್ಕೆ ಕಾರಣವಾಗಿದೆ.

Shimoga Nanjappa HOspital

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 19, 2022 at 3:02 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 19, 2022

Leave a Comment