ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 APRIL 2023
SHIMOGA : ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯನೂರು ಮಂಜುನಾಥ್ ಅವರು ರಾಜೀನಾಮೆ ಘೋಷಿಸಿದ್ದಾರೆ. ಹುಬ್ಬಳ್ಳಿಗೆ ತೆರಳಿರುವ ಅವರು ಸಭಾಪತಿಗೆ ರಾಜೀನಾಮೆ (Resignation) ಪತ್ರ ಹಸ್ತಾಂತರಿಸಲಿದ್ದಾರೆ. ಇದಕ್ಕೂ ಮುನ್ನು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಆಯನೂರು ಮಂಜುನಾಥ್ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಆಯನೂರು ಹೇಳಿದ 7 ಪ್ರಮುಖ ಸಂಗತಿ
ಶಿವಮೊಗ್ಗ ಜಿಲ್ಲೆಗೆ ಹೈವೇ, ರೈಲ್ವೆ, ಏರ್ ವೇ ಎಲ್ಲವೂ ಬಂದಿದೆ. ಆದರೆ ಒಂದೇ ಒಂದು ಕೈಗಾರಿಕೆ ಬಂದಿಲ್ಲ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಯಾವ ಉದ್ಯಮಿಯು ಶಿವಮೊಗ್ಗ ನಗರವನ್ನು ಆಯ್ಕೆ ಮಾಡುತ್ತಿಲ್ಲ. ಶಿವಮೊಗ್ಗಕ್ಕೆ ಅಶಾಂತ ನಗರ ಎಂಬ ಅಪಖ್ಯಾತಿ ಬಂದಿದೆ. ಇದು ನಮ್ಮೂರಿನ ಜನರಿಗಾದ ಅವಮಾನ. ನಮ್ಮೂರಿನ ಯುವಕರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾಗಿದೆ. ಇದೆಲ್ಲವನ್ನು ಸುಧಾರಿಸಬೇಕಿದೆ. ಗಲಭೆಗಳ ನಿಯಂತ್ರಣದಿಂದಷ್ಟೆ ಇದೆಲ್ಲ ಸಾಧ್ಯ.
ಕೂಲಿ ಕಾರ್ಮಿಕರು, ಆಟೋ ರಿಕ್ಷಾದವರು, ಬೀದಿ ವ್ಯಾಪಾರಿಗಳು, ಹೊಳೆ ಬಸ್ ನಿಲ್ದಾಣದಲ್ಲಿ ನಿತ್ಯ ನಿಲ್ಲುವವರು ಸೇರಿದಂತೆ ಸಾವಿರಾರು ಜನ ಒಂದು ಸಣ್ಣ ನಿಷೇಧಾಜ್ಞೆಯಿಂದ ಉಪವಾಸ ನರಳುವುದನ್ನು ಗಮನಿಸಿದಾಗ ಶಾಂತಿಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆಯ ನಿರ್ಧಾರ ಮಾಡಿದ್ದೇನೆ.
ಕುಬೇರರು, ಲಕ್ಷ್ಮಿ ಪುತ್ರರ ಎದುರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕಾರ್ಮಿಕರು, ಬಡವಾರ ಪರವಾಗಿ ಸ್ಪರ್ಧಿಸುವುದು ಪರಿಶ್ರಮದ ವಿಚಾರ. ಆದರೆ 32 ವರ್ಷದ ಏಕತಾನತೆ ಹೊಂದಿರುವ ರಾಜಕಾರಣದಲ್ಲಿ ಬದಲಾವಣೆ ತರಲು ಬಯಸುತ್ತಾರೆ. ಬಡವರ ಮೇಲೆ ಹೆಚ್ಚಿನ ನಂಬಿಕೆ ಇದೆ. ಈ ಹಿನ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ.
ನನಗೆ ಶಾಸಕ ಸ್ಥಾನ ಹೊಸದಲ್ಲ. ಏಳೆಂಟು ಚುನಾವಣೆ ಎದುರಿಸಿದ್ದೇನೆ. ಐದು ಬಾರಿ ಲೋಕಸಭೆ, ಎರಡು ವಿಧಾನ ಸಭೆ, ಒಮ್ಮೆ ವಿಧಾನ ಪರಿಷತ್ ಚುನಾವಣೆ ಎದುರಿಸಿದ್ದೇನೆ. ಅತಿ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದೇನೆ. ಕೇವಲ ಶಾಸಕನಾಗುವ ಉದ್ದೇಶ ನನ್ನದಲ್ಲ. ಶಿವಮೊಗ್ಗ ನಗರದ ಋಣ ತೀರಿಸುವ ಹೊಣೆಗಾರಿಕೆ ಇದೆ. ಗುರಿ ಸಾಧನೆಗಾಗಿ ಮಾರ್ಗ ಬದಲಾವಣೆ ಮಾಡುತ್ತಿದ್ದೇನೆ. ಟಿಕಟ್ಗಾಗಿ ಪಕ್ಷ ಬಿಡುತ್ತಿಲ್ಲ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಅಭ್ಯರ್ಥಿ ಘೋಷಣೆಯಾದ ಬಳಿಕ ನಿರ್ಧಾರ ಕೈಗೊಳ್ಳುವ ಉದ್ದೇಶವಿತ್ತು. ಈ ಕ್ಷಣದವರೆಗೆ ಅಭ್ಯರ್ಥಿ ಪ್ರಕಟವಾಗಿಲ್ಲ. ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನ. ನಾಮಪತ್ರ ಸಲ್ಲಿಸುವ ಮೊದಲು ಚಿಹ್ನೆ ಇರುವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಇವತ್ತೆ ಕೊನೆಯ ದಿನ. ನಾಳೆ ರಾಜೀನಾಮೆ (Resignation) ನೀಡಲು ಸಾಧ್ಯವಿಲ್ಲ. ರಾಜೀನಾಮೆ ಸ್ವೀಕೃತವಾಗದೆ ಇದ್ದರೆ ಅದು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯೊಳಗೆ ಬರಲಿದೆ. ಆ ಕಾರಣಕ್ಕೆ ಈವರೆಗೂ ನಿರೀಕ್ಷೆ ಮಾಡಿದ್ದವನು ಈಗ ರಾಜೀನಾಮೆ ನೀಡುತ್ತಿದ್ದೇನೆ.
ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡುತ್ತಿದ್ದೇನೆ. ಅಲ್ಲಿಂದ ಹೊರಟು ಮಧ್ಯಂತರದಲ್ಲಿ ಮುಖಂಡರೊಂದಿಗೆ ಮಾತುಕತೆ ಮಾಡಲಿದ್ದೇನೆ. ಆ ಬಳಿಕ ಉಳಿದ ವಿಚಾರಗಳು ಬಹಿರಂಗವಾಗಲಿದೆ.
ಗುರುವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಂಜೆ ವೇಳೆಗೆ ಸ್ಪಷ್ಟನೆ ಸಿಗಲಿದೆ. ಇವತ್ತು ಮಧ್ಯಾಹ್ನ ರಾಜ್ಯಮಟ್ಟದ ನಾಯಕರ ಜೊತೆಗೆ ಮಾತುಕತೆ ನಡೆಯಲಿದೆ. ಪಕ್ಷೇತರನಾಗಿ ಅಲ್ಲ. ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ.
ಇದನ್ನೂ ಓದಿ – ಆಯನೂರು ಮಂಜುನಾಥ್ ಜೆಡಿಎಸ್ ಅಭ್ಯರ್ಥಿ, ಮಾಜಿ ಸಿಎಂ ಹೇಳಿದ್ದೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422