ಶಿವಮೊಗ್ಗ ಲೈವ್.ಕಾಂ | 19 ಏಪ್ರಿಲ್ 2019
ಐದು ವರ್ಷದ ಸಾಧನೆ ಮೇಲೆ ಮತ ಕೇಳಬೇಕಾದವರು ಉಗ್ರಗಾಮಿ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜೀವ್ ಗಾಂಧಿ, ಇಂದಿರಾಗಾಂಧಿಯವರು ದೇಶಕ್ಕಾಗಿ ತಮ್ಮ ದೇಹವನ್ನೇ ತ್ಯಾಗ ಮಾಡಲಿಲ್ಲವಾ..? ಹೀಗಂತ ಬಿಜೆಪಿ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕೀಯಕ್ಕೋಸ್ಕರ ಸೈನಿಕರನ್ನು ಬಳಸಿಕೊಳ್ತೀರಾ. ಸೈನಿಕರ ಸಾವಿನಿಂದ 22 ಸೀಟು ಗೆಲ್ತೀವಿ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಸೇರಿ ಎಲ್ಲ ಬಿಜೆಪಿ ನಾಯಕರು ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.
ಅವರೊಬ್ಬ ಮೆಂಟಲ್ ಕೇಸ್
ಈಶ್ವರಪ್ಪ ಅವರು ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈಶ್ವರಪ್ಪನನ್ನು ನಾವು ಮೆಂಟಲ್ ಕೇಸ್ ಅಂಥ ಕನ್ಸಿಡರ್ ಮಾಡಿದ್ದೇವೆ. ಅವರನ್ನು ನಾವು ಸೀರಿಯಸ್ ಆಗೇ ತೆಗದುಕೊಂಡಿಲ್ಲ. ಸಂವಿಧಾನ ಏನು ಹೇಳುತ್ತೆ ಅನ್ನೋದೇ ಈಶ್ವರಪ್ಪಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ಅವರನ್ನು ನಾವು ಲೀಡರ್ ಅಂತಲೇ ಅಂದುಕೊಂಡಿಲ್ಲ. ವೋಟಿಗೋಸ್ಕರ ಏನ್ ಬೇಕಾದ್ರೂ ಮಾತನಾಡ್ತಾರೆ. ವೀರಶೈವ ಲಿಂಗಾಯತರ ಸಮೇತ ಎಲ್ಲ ಸಮುದಾಯದವರು ಬಿಜೆಪಿಗೆ ಉತ್ತರ ಕೊಡುತ್ತಾರೆ. ಕೇವಲ ಹಿಂದೂ ಮುಂದೂ ಅಂತ ಹೇಳ್ತೀರಲ್ಲ. ದೇಶದ ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕುತ್ತೀರಾ? ಅಲ್ಪಸಂಖ್ಯಾತರು ಈ ದೇಶದಲ್ಲಿ ಇರಬಾರದ ಎಂದು ಈಶ್ವರಪ್ಪ ಅವರನ್ನು ಪ್ರಶ್ನಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200