‘ಯಡಿಯೂರಪ್ಪಗೆ ಮಹಿಳೆಯರ ಶಾಪ, ಗೀತಾ, ಶಿವರಾಜ್‌ ಕುಮಾರ್‌ ಹಿಂದೂ ಸಮಾಜದ ಕ್ಷಮೆ ಕೇಳಬೇಕುʼ

SHIVAMOGGA LIVE NEWS | 19 APRIL 2024 ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ELECTION NEWS : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮುಂದುವರೆಸಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಮತ್ತು ಪತಿ ಶಿವರಾಜ್‌ ಕುಮಾರ್‌ ಅವರು ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಈಶ್ವರಪ್ಪ ಏನೇನು ಹೇಳಿದರು?

ಅದೇ ದೊಡ್ಡ ಶೋ ಅಂದುಕೊಂಡಿದ್ದಾರೆ

ನಿನ್ನೆ ರೋಡ್‌ ಶೋನಲ್ಲಿ ಮೂವರು ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಇದನ್ನೆ ದೊಡ್ಡ ಶೋ ಅಂದುಕೊಂಡಿದ್ದಾರೆ. ನನ್ನ ನಾಮಪತ್ರ ಸಲ್ಲಿಕೆ ವೇಳೆ 35 ಸಾವಿರ ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದರು. ಜಿಲ್ಲೆಯ ಶೇ.60ರಷ್ಟು ಜನರು ನನ್ನೊಂದಿಗಿದ್ದಾರೆ. ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ನಂಬಿಕೊಂಡಿದೆ. ಆದರೆ ಈಗ ಅವರು ಬದಲಾಗಿದ್ದಾರೆ. ಮಹಿಳೆಯರ ಶಾಪದಿಂದ ಯಡಿಯೂರಪ್ಪ ದಾರಿ ತಪ್ಪಿದ್ದಾರೆ. ಹಾಗಾಗಿ ರಾಘವೇಂದ್ರ ಸೋಲುತ್ತಾರೆ ಎಂದು ಈ‍ಶ್ವರಪ್ಪ ಹೇಳಿದರು.

ಗೀತಾ, ಶಿವರಾಜ್‌ ಕುಮಾರ್‌ ಕ್ಷಮೆ ಕೇಳಬೇಕು

ಡಾ. ರಾಜ್‌ ಕುಮಾರ್‌ ಅವರು ರಾಘವೇಂದ್ರ ಸ್ವಾಮಿ ಕುರಿತು ಹೇಳಿರುವ ಹಾಡುಗಳು ಅವರ ಭಕ್ತಿಯನ್ನು, ಹಿಂದೂ ಸಮಾಜದ ಮೇಲಿರುವ ಗೌರವ ತೋರಿಸುತ್ತದೆ. ಈಚೆಗೆ ಜಟ್‌ಪಟ್‌ ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಮತ್ತು ಶಿವರಾಜ್‌ ಕುಮಾರ್‌ ಅವರು ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿದ್ದಾರಂತೆ. ಆದ್ದರಿಂದ ಅವರಿಬ್ಬರು ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.  

ಸಾಧು, ಸಂತರಿಗೆ ಬೆದರಿಕೆ

ಕ್ಷೇತ್ರ ವ್ಯಾಪ್ತಿಯ ಸಾಧು, ಸಂತರನ್ನು ಭೇಟಿಯಾಗುತ್ತಿದ್ದೇನೆ. ಅವರೆಲ್ಲ ತನಗೆ ಆಶೀರ್ವಾದ ಮಾಡತ್ತಿದ್ದಾರೆ. ಇನ್ನು, ಲಿಂಗಾಯತ ಸಮುದಾಯದ ಅನೇಕ ಮಹಿಳೆಯರು ತನ್ನ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನು ಸಹಿಸಲಾಗದೆ ಸಾಧು, ಸಂತರಿಗೆ ಬೆದರಿಕೆ ಮುಂದುವರೆದಿದೆ. ಆದರೆ ಸಾಧು, ಸಂತರು ತನಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಶೀರ್ವದಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ – ಇವತ್ತೇ ಕೊನೆ, ಶಿವಮೊಗ್ಗದಲ್ಲಿ ಎಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ? ಹಿಂಪಡೆಯಲು ಎಷ್ಟು ದಿನ ಅವಕಾಶ?

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗ ಬಳಿ ಕಾರು ಪಲ್ಟಿ, ಬೆಂಗಳೂರಿನ ನಾಲ್ವರಿಗೆ ಗಾಯ, ಹೇಗಾಯ್ತು ಘಟನೆ?