ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 DECEMBER 2023
SHIMOGA : ಹಿಂದೆ ಮೊಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ಇದ್ದ. ಈಗ ಸಿದ್ದರಾಮಯ್ಯ ಹುಚ್ಚು ದೊರೆಯಾಗಿದ್ದಾರೆ. ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ ಪರಿ ಇದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದರು.
ಈಶ್ವರಪ್ಪ ಹೇಳಿದ 4 ಪ್ರಮುಖಾಂಶ
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಲು ಸಜ್ಜಾಗಿವೆ. ಇದು ಆಶಾದಾಯಕ ಬೆಳೆವಣಿಗೆ. ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಿ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಮಾಡಲು ಶ್ರಮಿಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಒಂದೂ ಸ್ಥಾನವನ್ನೂ ಗೆಲ್ಲವುದಿಲ್ಲ.
ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಅಂದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಅನ್ನುತ್ತಿದ್ದಾರೆ. ರಾಜ್ಯದಲ್ಲಿ ಬಹುಮತ ಇದ್ದಾಗ ದಲಿತರನ್ನು ಸಿಎಂ ಮಾಡಬಹುದಿತ್ತು. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಬಹಮತ ಪಡೆಯುವುದು ಕನಸಿನ ಮಾತು. ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲು ಇಲ್ಲ, ಬೆಂಬಲದ ಹೇಳಿಕೆಯನ್ನು ನೀಡಿಲ್ಲ. ಈ ರೀತಿ ಅಲ್ಪ ಸಂಖ್ಯಾತರು, ದಲಿತರ ಮೂಗಿಗೆ ತುಪ್ಪ ಸವರುತ್ತಿದ್ದಾರೆ.
ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಪದೇ ಪದೆ ಹೇಳಿಕೆ ನೀಡುತ್ತಿದ್ದಾರೆ. ಎಂಟು ವರ್ಷ ಅಧಿಕಾರ ನಡೆಸಿದ್ದಾರೆ. ನವೆಂಬರ್ ತಿಂಗಳಲ್ಲಿ ವರದಿ ಬಿಡುಗಡೆಯ ಭರವಸೆ ನೀಡಿದ್ದರು. ಆದರೆ ವರದಿ ಬಿಡುಗಡೆ ಮಾಡುತ್ತಿಲ್ಲ. ಈ ಮೂಲಕ ಹಿಂದುಳಿದವರ ಮೂಗಿಗೆ ತುಪ್ಪ ಸವರುತ್ತಿದ್ದಾರೆ.
ರಾಜ್ಯ ಶಾಂತಿಯುತವಾಗಿದೆ. ಇಂತಹ ಸಂದರ್ಭ ಹೈಕೋರ್ಟ್ ತೀರ್ಪು ವಿರೋಧಿಸಿ ಹಿಜಾಬ್ ನಿಷೇಧ ಆದೇಶ ಹಂಪಡೆಯುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅದೇಶ ಹಿಂಪಡೆಯುವಂತೆ ಮುಸ್ಲಿಮರಾರೂ ಮನವಿ ಮಾಡಿರಲಿಲ್ಲ. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್ನಲ್ಲಿದೆ. ಇಂತಹ ವೇಳೆ ವಿದ್ಯಾರ್ಥಿಗಳ ಮಧ್ಯೆ ಹಿಂದು – ಮುಸ್ಲಿಂ ಎಂದು ಭೇದ ಮೂಡಿಸುತ್ತಿದ್ದಾರೆ. ಇದರಿಂದ ಅಶಾಂತಿ ಉಂಟಾದರೆ ಸರ್ಕಾರವೆ ಹೊಣೆ. ನ್ಯಾಯಾಂಗ ನಿಂದನೆಯಾಗುತ್ತಿದ್ದು ಕಾನೂನು ಸಚಿವರು ರಾಜೀನಾಮೆ ನೀಡಬೇಕು.
ಇದನ್ನೂ ಓದಿ – ಬಂಗಾರಧಾಮದಲ್ಲಿ ಸ್ಮಾರಕ ರೆಡಿ, ಲೋಕಾರ್ಪಣೆಗೆ ದಿನಾಂಕ ನಿಗದಿ, ಯಾರೆಲ್ಲ ಭಾಗವಹಿಸ್ತಿದ್ದಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422