ಸಚಿವ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಮಾಜಿ ಎಂಎಲ್ಎ ಆಕ್ರೋಶ, ಬಸ್ಸಲ್ಲಿ ಕರೆದೊಯ್ದವರ ಬಗ್ಗೆ ಈಗ ಮಾತಾಡಲಿ ಅಂತಾ ಸವಾಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019

71053142 930302700664484 3871352906363961344 n.jpg? nc cat=109& nc oc=AQm43a lj8UotMIYvWYSDacXZlLoHNpQE1yctTqm6HxxFQyffmYpSuh Du5D1ZsHTXs& nc ht=scontent.fblr1 3

ರಾಜ್ಯಮಟ್ಟದ ನಾಯಕರೆನಿಸಿಕೊಳ್ಳುವ ಸಲುವಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಈಶ್ವರಪ್ಪ ಪದೆ ಪದೆ ನಿಂದಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ವ್ಯಂಗ್ಯವಾಡಿದ್ದಾರೆ.

Prashanth GPS copy

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಅಭಿವೃದ್ದಿ ವಿಚಾರವಾಗಿ ಸುದ್ದಿಯಾಗುವ ಬದಲು ಪ್ರತಿದಿನ ಬೈದು ಸುದ್ದಿಯಾಗುತ್ತಿದ್ದಾರೆ ಈಶ್ವರಪ್ಪ ಎಂದು ವ್ಯಂಗ್ಯವಾಡಿದರು.

ಬಸ್ಸಲ್ಲಿ ಕರೆದೊಯ್ದವರಿಗೆ ಹಕ್ಕು ಪತ್ರ ಕೊಡಿಸಿ

ಹಕ್ಕುಪತ್ರ ಕೊಡಿಸುವಂತೆ ಈಶ್ವರಪ್ಪ ಅವರು ಶಿವಮೊಗ್ಗದ ಜನರನ್ನು ಬಸ್ಸುಗಳಲ್ಲಿ ಬೆಂಗಳೂರಿಗೆ ಕರೆದೊಯ್ದು, ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಈಗ ಅದರ ಕುರಿತು ಈಶ್ವರಪ್ಪ ಅವರು ಮಾತಾಡುತ್ತಿಲ್ಲ. ಅವತ್ತು ಬಸ್ಸಿನಲ್ಲಿ ಕರೆದೊಯ್ದವರಿಗೆ ಈಗಲಾದರು ಹಕ್ಕು ಪತ್ರ ಕೊಡಿಸಲಿ.  ಇನ್ನು, ಆಶ್ರಯ ಸಮಿತಿಗೆ ಈವರೆಗೆ ಒಂದು ಸಭೆ ಮಾತ್ರ ಮಾಡಲಾಗಿದೆ. ಕ್ಷೇತ್ರದಲ್ಲಿ ಯಾವುದೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂದು ಪ್ರಸನ್ನಕುಮಾರ್ ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment