ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 JUNE 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು (Party Workers) ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇವತ್ತು ಆರ್ಯ ಈಡಿಗ ಭವನದಲ್ಲಿ ಕೃತಜ್ಞತಾ ಸಭೆ ಆಯೋಜಿಸಿದ್ದರು. ದೊಡ್ಡ ಸಂಖ್ಯೆಯ ಬೆಂಬಲಿಗರು ಭಾಗವಹಿಸಿದ್ದರು.
ಗೀತಾ ಶಿವರಾಜ್ ಕುಮಾರ್ ಹೇಳಿದ್ದೇನು?
ಶಿವಮೊಗ್ಗದಲ್ಲಿ ಶಕ್ತಿಧಾಮ ನಿರ್ಮಾಣ ಮಾಡುತ್ತೇವೆ. ಶೋಷಿತ ವರ್ಗಗಳಿಗೆ ನೆರಳಾಗಿರುತ್ತೇವೆ. ಅದೇ ರೀತಿ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ಜಿಲ್ಲೆಯಲ್ಲಿ ಮನೆ ಇಲ್ಲ ಎನ್ನುವ ಆರೋಪ ನಮ್ಮ ಮೇಲಿದೆ. ಇದಕ್ಕೆ ಉತ್ತರವಾಗಿ ಖಂಡಿತ ಮನೆ ನಿರ್ಮಾಣ ಮಾಡುತ್ತೇವೆ. ಕ್ಷೇತ್ರಕ್ಕೆ ಸಾಮಾಜಿಕ ಕೊಡುಗೆ ನೀಡಲು ಹೆಚ್ಚಿನ ಶ್ರಮ ಹಾಕುತ್ತೇವೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.
ಶಿವರಾಜ್ ಕುಮಾರ್ ಪ್ರಶ್ನೆ ಏನು?
ಚುನಾವಣೆಯಲ್ಲಿ ಪತ್ನಿ ಗೀತಾ ಪರ ಕಾರ್ಯಕರ್ತನಾಗಿ ಪ್ರಚಾರ ಮಾಡಿದ್ದೇನೆ. ಕೆಲವರು ಇದನ್ನು ನಾಟಕ ಎಂದು ಬಿಂಬಿಸುತ್ತಿದ್ದಾರೆ. ನಿಜ ಜೀವನದಲ್ಲಿ ನಾಟಕ ಮಾಡಿ ಅಭ್ಯಾಸ ನಮಗಿಲ್ಲ. ಕೂಲಿ ಕೆಲಸ ಮಾಡಿ ಬೇಕಾದರೂ ಹೆಂಡತಿ ಮಕ್ಕಳನ್ನು ಸಾಕುತ್ತೇನೆ. 50 ದಿನ ಕ್ಷೇತ್ರದ ಜನರೊಂದಿಗೆ ಹೆಜ್ಜೆ ಹಾಕಿದ್ದೇನೆ. ಈ ಬಗ್ಗೆ ಖುಷಿ ಇದೆ. ಗೀತಾ ಅವರನ್ನು ರಾಜಕೀಯಕ್ಕೆ ಕಳುಹಿಸಿದ್ದು ತಪ್ಪಾ? ಪ್ರತಿಯೊಬ್ಬರಿಗೂ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಆದರೆ, ಕೆಲವರ ಟೀಕೆಗಳು ಬೇಸರ ಉಂಟು ಮಾಡಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಸಚಿವ ಮಧು ಹೇಳಿದ್ದೇನು?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಅಭಿಪ್ರಾಯ ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಪೂರ್ತಿ ಆಗಲಿದೆ. ಗೀತಾ ಶಿವರಾಜಕುಮಾರ್ ಅವರು ಕ್ಷೇತ್ರದಲ್ಲಿ ಸೋತಿರಬಹುದು. ಚುನಾವಣೆಯಲ್ಲಿ 5.30 ಲಕ್ಷ ಮತ ಪಡೆದು ಕ್ಷೇತ್ರದ ಮತದಾರರ ಹೃದಯ ಗೆದ್ದಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬಿ ಬಡವರ ಹಸಿವು ನೀಗಿಸುತ್ತಿದೆ. ಜನರು ಗೀತಾ ಶಿವರಾಜ್ ಕುಮಾರ್ ಅವರ ಸೋಲಿಗೆ ಕಾರಣವೇನು ಎಂಬುದರ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ – ಉದ್ಯಮಿಯ ವಾಟ್ಸಪ್‌ಗೆ ಬಂತು ಫೋಟೊ, ನೋಡ್ತಿದ್ದಂತೆ ಆಯ್ತು ಡಿಲೀಟ್, ನಂತರ ಬಂತು ‘ಬ್ರೇಕಿಂಗ್ ನ್ಯೂಸ್ʼ