ಬೆಂಗಳೂರು: ಸೊರಬ ಶಾಸಕ ಮಧು ಬಂಗಾರಪ್ಪ ಅವರು ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
60 ದಿನದ ಬಳಿಕ ಪುನಃ ಮಿನಿಸ್ಟರ್
ಸಿದ್ದರಾಮಯ್ಯ ಅವ ಸರ್ಕಾರದಲ್ಲಿ ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಜೂನ್ 3ರಂದು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಿಗೆ ಸಂಪುಟ ವಿಸರ್ಜನೆ ಆಗಿತ್ತು. ಸರಿಯಾಗಿ ಎರಡು ತಿಂಗಳ ಬಳಿಕ ಆಗಸ್ಟ್ 3ರಂದು ಮಧು ಬಂಗಾರಪ್ಪ ಅವರು ಪುನಃ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಈ ಬಾರಿ ಯಾವ ಖಾತೆ ಲಭಿಸಲಿದೆ ಎಂಬ ಕುತೂಹಲವಿದೆ.
