ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಆಶೀರ್ವಾದ, ಎರಡೂ ಪಕ್ಷಗಳ ಕಾರ್ಯಕರ್ತರ ದುಡಿಮೆ, ಎಸ್.ಬಂಗಾರಪ್ಪನವರ ಹಾರೈಕೆ, ಸಾಕಷ್ಟು ಸಮಯ ಇರುವುದು ಇವೆಲ್ಲ ಕಾರಣಗಳಿಂದ ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಅಂತಾ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಮಧು ಬಂಗಾರಪ್ಪ, ಚುನಾವಣಾ ಕಾವು ಏರುತ್ತಿದೆ. ಈಗಾಗಲೇ ಎರಡು ಸುತ್ತು ಕ್ಷೇತ್ರವನ್ನು ಸುತ್ತಿ ಬಂದಿದ್ದೇನೆ. ಬೈಂದೂರಿನಲ್ಲಂತೂ ಅಪಾರ ಜನರ ಪ್ರೀತಿ ಸಿಕ್ಕಿದೆ. ಕಳೆದ ಸಾರಿಯಂತೆ ಈ ಬಾರಿ ಸಮಯದ ತೊಂದರೆ ಇಲ್ಲ. ಇನ್ನು ಸಾಕಷ್ಟು ಸಮಯ ಇದೆ. ಖಂಡಿತ ಮತ್ತೊಮ್ಮೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿ ಮೋದಿ ಸರ್ಕಾರದ ವಿಫಲತೆ, ರಾಜ್ಯ ಸರ್ಕಾರದ ಯೋಜನೆಗಳನ್ನು ತಿಳಿಸಿ ಮತ ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದರು.
ಸೋತರು ನನ್ನ ಮನವಿಗೆ ಸ್ಪಂದಿಸಿದರು
ಸೊರಬ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಈಗಾಗಲೇ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿಗಳು, ನೀರಾವರಿ ಮಂತ್ರಿಗಳು ನನ್ನ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ನಾನು ಸೋತರೂ ಕೂಡ ನನ್ನ ಮನವಿಗೆ ಸ್ಪಂದಿಸಿದ್ದಾರೆ. ಬಿಜೆಪಿಯವರು ಮತ್ತೆ ಮತ್ತೆ ಇದು ತಮ್ಮ ಪ್ರಯತ್ನ ಎನ್ನುವುದನ್ನು ಬಿಡಬೇಕು ಎಂದರು.
ಧರ್ಮ, ಯುದ್ಧದ ಹೆಸರಲ್ಲಿ ಮತ ಕೇಳ್ತಿದ್ದಾರೆ
ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಮಧು ಬಂಗಾರಪ್ಪ, ಧರ್ಮದ ಹೆಸರಿನಲ್ಲಿ, ಯುದ್ಧದ ಹೆಸರಿನಲ್ಲಿ ಮತ ಕೇಳುವುದು ಯಾವ ನ್ಯಾಯ. ರಾಮನ ಬಿಟ್ಟು ಈಗ ಬಾಂಬ್ ಹಿಡಿದಿದ್ದಾರೆ. ಈ ನಾಡಿಗಾಗಿ ಪ್ರಾಣ ತೆತ್ತ ಯೋಧರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಐಟಿ ದಾಳಿಗಳ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಬೇಕಂತಲೇ ಈ ದಾಳಿಗಳು ನಡೆಯುತ್ತಿವೆ. ನೋಟು ಅಮಾನ್ಯೀಕರಣ, ಜಿಎಸ್’ಟಿಯಂತಹ ಕ್ರಮ ತೆಗೆದುಕೊಂಡು ಬಡವರನ್ನೇ ಬಲಿ ತೆಗೆದುಕೊಂಡ ಸರ್ಕಾರವಿದು ಎಂದು ದೂರಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]