ವಿಧಾನಸೌಧಲ್ಲಿ ಮಧು ಬಂಗಾರಪ್ಪ ಕಚೇರಿ ಉದ್ಘಾಟನೆ, ಕೊಠಡಿ ಸಂಖ್ಯೆ ಎಷ್ಟು?

ಶಿವಮೊಗ್ಗ ಲೈವ್.ಕಾಂ | ಬೆಂಗಳೂರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ನೂತನ ಕಚೇರಿಯನ್ನು ವಿಧಾನಸೌಧದ ಎರಡನೆ ಮಹಡಿಯಲ್ಲಿ ಉದ್ಘಾಟಿಸಲಾಯಿತು.

Minister-Madhu-Bangarappa-Office-Inaugurated-at-Vidhana-Soudha

ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್. ಮಧು ಬಂಗಾರಪ್ಪ ಅವರು, ಬೆಂಗಳೂರಿನ ವಿಧಾನಸೌಧದ 262 ಮತ್ತು 262(A) ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಕಚೇರಿ ಉದ್ಘಾಟಿಸಿದರು. ಇಂದಿನಿಂದ ಸಚಿವರು ಈ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದ್ದಾರೆ. ಈ ಸಂದರ್ಭ ಶಾಸಕರಾದ ಭೀಮಣ್ಣ ಟಿ.ನಾಯ್ಕ್ ಮತ್ತು ಭೀಮಸೇನ ಬಿ. ಚಿಮ್ಮನಕಟ್ಟಿ, ಸಿಬ್ಬಂದಿ ಉಪಸ್ಥಿತರಿದ್ದರು.