SHIVAMOGGA LIVE NEWS | 18 APRIL 2024
ELECTION NEWS : ಚುನಾವಣಾ ಆಯೋಗಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಒಟ್ಟು 73.71 ಕೋಟಿ ರೂ. ಮೌಲ್ಯದ ಆಸ್ತಿ ವಿವರ ಸಲ್ಲಿಸಿದ್ದಾರೆ. ರಾಘವೇಂದ್ರ ಮತ್ತು ಪತ್ನಿ ತೇಜಸ್ವಿನಿ ಅವರ ಆಸ್ತಿ ವಿವರವನ್ನು ಸಲ್ಲಿಸಲಾಗಿದೆ. ರಾಘವೇಂದ್ರ 55.85 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ 17.86 ಕೋಟಿ ರೂ. ಆಸ್ತಿ ಇದೆ.
ರಾಘವೇಂದ್ರ, ಪತ್ನಿ ಬಳಿ ಎಷ್ಟಿದೆ ಹಣ?
ರಾಘವೇಂದ್ರ ಕೈಯಲ್ಲಿ 33,291 ರೂ. ಹಣವಿದೆ. ಪತ್ನಿ ತೇಜಸ್ವಿನಿ ಬಳಿ 9,39,109 ರೂ. ಇದೆ. ರಾಘವೇಂದ್ರ ವಿವಿಧ ಬ್ಯಾಂಕ್ಗಳಲ್ಲಿ 13 ಅಕೌಂಟ್ ಹೊಂದಿದ್ದಾರೆ. 98,01,123 ರೂ. ಹಣ ಖಾತೆಗಳಲ್ಲಿವೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್ಗಳಲ್ಲಿ 8 ಅಕೌಂಟ್ಗಳಿವೆ. ಇವುಗಳಲ್ಲಿ 25,65,577 ರೂ. ಹಣವಿದೆ. ರಾಘವೇಂದ್ರ 15 ಕಂಪನಿಗಳಲ್ಲಿ 7.68 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ತೇಜಸ್ವನಿ ಆರು ಕಂಪನಿಗಳಲ್ಲಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್ ಫಂಡ್ಸ್, ಬಾಂಡ್ಗಳಲ್ಲಿ ರಾಘವೇಂದ್ರ 2.22 ಕೋಟಿ ರೂ., ತೇಜಸ್ವನಿ 30 ಸಾವಿರ ರೂ. ಹೂಡಿಕೆ ಮಾಡಿದ್ದಾರೆ.
ಪತ್ನಿ, ಮಕ್ಕಳು, ಸಹೋದರನಿಗೆ ಸಾಲ..!
ರಾಘವೇಂದ್ರ ತಮ್ಮ ಪತ್ನಿ ತೇಜಸ್ವಿನಿ, ಮಕ್ಕಳಾದ ಭಗತ್, ಸುಭಾಷ್ ಮತ್ತು ತಮ್ಮ ಸಹೋದರ ವಿಜಯೇಂದ್ರಗೆ ಸಾಲ ನೀಡಿದ್ದಾರೆ. ವಿಜಯೇಂದ್ರಗೆ 85 ಲಕ್ಷ ರೂ., ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂ., ಪುತ್ರ ಭಗತ್ಗೆ 65 ಲಕ್ಷ ರೂ., ಮತ್ತೊಬ್ಬ ಪುತ್ರ ಸುಭಾಷ್ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ವಿವಿಧ ಸಂಸ್ಥೆಗಳಿಗೆ ರಾಘವೇಂದ್ರ 20.39 ಕೋಟಿ ರೂ. ಸಾಲ ನೀಡಿದ್ದಾರೆ. ಪತ್ನಿ ತೇಜಸ್ವನಿ ಭಗತ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ಗೆ 2.50 ಲಕ್ಷ ರೂ. ನೀಡಿದ್ದಾರೆ. ಇನ್ನೊಂದೆಡೆ ರಾಘವೇಂದ್ರ ಮತ್ತು ತೇಜಸ್ವಿನಿ ಅವರು ಸಾಲಗಾರರಾಗಿದ್ದಾರೆ. ರಾಘವೇಂದ್ರಗೆ 69.39 ಲಕ್ಷ ರೂ. ಸಾಲವಿದೆ. ಪತ್ನಿ ತೇಜಸ್ವಿನಿಗೆ 12.91 ಕೋಟಿ ರೂ. ಸಾಲವಿದೆ.
ಚಿನ್ನ, ವಜ್ರ, ಬೆಳ್ಳಿ, ವಾಹನಗಳು
1988 ಮಾಡಲ್ನ ಅಂಬಾಸಿಡರ್, ಒಂದು ಟ್ರಾಕ್ಟರ್, ಟೊಯೊಟ ಫಾರ್ಚುನರ್ ಕಾರು ರಾಘವೇಂದ್ರ ಹೆಸರಲ್ಲಿದೆ. ಇವುಗಳ ಒಟ್ಟು ಮೌಲ್ಯ 44.77 ಲಕ್ಷ ರೂ. ಇದೆ. ರಾಘವೇಂದ್ರ ಬಳಿ 1021.50 ಗ್ರಾಂ ಚಿನ್ನವಿದೆ. 114.26 ಕ್ಯಾರೆಟ್ ವಜ್ರ, 8.6 ಕೆ.ಜಿ ಬೆಳ್ಳಿ, 42 ಬೆಲೆಬಾಳುವ ಹರಳು ಇದೆ. ಇವುಗಳ ಮೌಲ್ಯ 98.83 ಲಕ್ಷ ರೂ. ಇನ್ನು, ಪತ್ನಿ ತೇಜಸ್ವಿನಿ ಬಳಿ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್ ವಜ್ರ, 5.1 ಕೆ.ಜಿ ಬೆಳ್ಳಿ ಇದೆ. ಇದರ ಮೌಲ್ಯ 1.13 ಕೋಟಿ ರೂ.
ಎಲ್ಲೆಲ್ಲಿ ಎಷ್ಟು ಆಸ್ತಿ ಇದೆ?
ರಾಘವೇಂದ್ರ ಹೆಸರಿನಲ್ಲಿ 11.33 ಎಕರೆ ಕೃಷಿ ಜಮೀನು ಇದೆ. ಇದರ ಮೌಲ್ಯ 1.32 ಕೋಟಿ ರೂ., ವಿವಿಧೆಡೆ 18 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 8.07 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ರಾಘವೇಂದ್ರ ಹೆಸರಿನಲ್ಲಿ 1.24 ಕೋಟಿ ರೂ. ಮೌಲ್ಯದ ಕಟ್ಟಡಗಳಿವೆ. ರಾಘವೇಂದ್ರ ಹೆಸರಿನಲ್ಲಿ ಶಿವಮೊಗ್ಗದ ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳಿವೆ. ಇವುಗಳ 4.18 ಕೋಟಿ ರೂ., ಪತ್ನಿ ತೇಜಸ್ವಿನಿ 6.82 ಕೋಟಿ ರೂ. ಮೌಲ್ಯದ ವಾಸದ ಮನೆಗಳಿವೆ.
ಇನ್ನು, ಬಿ.ವೈ.ರಾಘವೇಂದ್ರ ವಿರುದ್ಧ ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾರಾಜಿಸಿದ ಕೇಸರಿ, ಹಸಿರು ಧ್ವಜಗಳು, ಮೊಳಗಿತು ರಾಘವೇಂದ್ರ ಪರ ಘೋಷಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200