ಆಯನೂರು ಮಂಜುನಾಥ್ ದಾಖಲೆಯನ್ನೇ ಹಿಂದಿಕ್ಕಿದ ರಾಘವೇಂದ್ರ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | 23 ಮೇ 2019

ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ, ಬಿ.ವೈ.ರಾಘವೇಂದ್ರ ಹೊಸ ದಾಖಲೆ ಬರೆದಿದ್ದಾರೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಪಡೆದು ಗೆಲುವು ಸಾಧಿಸಿದವರ ಸಾಲನಲ್ಲಿ, ಬಿ.ವೈ.ರಾಘವೇಂದ್ರೆ ಎರಡನೆಯವರಾಗಿದ್ದಾರೆ.

ಮಧು ಬಂಗಾರಪ್ಪ ವಿರುದ್ಧ ಬಿ.ವೈ.ರಾಘವೇಂದ್ರ 2,23,360 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ, ಲೋಕಸಭೆ ಚುನಾವಣೆಯಲ್ಲಿ, ಜಿಲ್ಲೆಯ ಯಾವ ರಾಜಕಾರಣಿಯೂ ಇಷ್ಟು ಅಂತರದಲ್ಲಿ ಗೆಲುವು ಸಾಧಿಸಿಲ್ಲ.

2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ವಿರುದ್ಧ ಬಿಜೆಪಿಯ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮಟ್ಟಿಗೆ ಇದು ದಾಖಲೆಯಾಗಿದೆ.

1998ರಲ್ಲಿ ಕಾಂಗ್ರೆಸ್’ನ ಡಿ.ಬಿ.ಚಂದ್ರೇಗೌಡ ಅವರ ವಿರುದ್ಧ ಆಯನೂರು ಮಂಜುನಾಥ್ 1,59,907 ಮತಗಳ ಲೀಡ್ ಪಡೆದಿದ್ದರು.

1980ರಲ್ಲಿ JNP ಪಕ್ಷದ ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್’ನ ಎಸ್.ಟಿ.ಖಾದ್ರಿ ಅವರು 1,51,798 ಲೀಡ್ ಪಡೆದಿದ್ದರು.

ಈವರೆಗೂ ಆಯನೂರು ಮಂಜುನಾಥ್, ಎಸ್.ಟಿ.ಖಾದ್ರಿ ಅವರು ಒಂದೂವರೆ ಲಕ್ಷ ಮತಗಳ ಲೀಡ್ ಪಡೆದಿದ್ದೇ ದಾಖಲೆಯಾಗಿತ್ತು. ಈಗ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ, ಈ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment