‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್‌ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

 ಶಿವಮೊಗ್ಗ  LIVE 

ಶಿವಮೊಗ್ಗ: ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ, ಅದರ ಬದಲಾಗಿ ವಿಬಿ ಜಿ – ರಾಮ್ ಜಿ
(Ram G) ಯೋಜನೆಯನ್ನು ಜಾರಿಗೆ ತಂದಿದೆ. ನೂತನ ಯೋಜನೆಯನ್ನು ದೇಶಾದ್ಯಂತ ಸಾರ್ವಜನಿಕರು ಸ್ವಾಗತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರ ರಾಜಕೀಯ ಲಾಭಕ್ಕಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಗ್ರಾಮಗಳ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ತಡೆಯುವ ದೃಷ್ಟಿಯಿಂದ ಮೋದಿಯವರು ಈ ಕ್ರಾಂತಿಕಾರಿ ಯೋಜನೆಯನ್ನು ತಂದಿದ್ದಾರೆ. ಆದರೆ ಯೋಜನೆಯ ಹೆಸರಿನಲ್ಲಿ ರಾಮ್ ಜಿ ಎಂದು ಇರುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುತ್ತಿರುವುದು ಅವರ ವೈಚಾರಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ಮಹಾತ್ಮಾ ಗಾಂಧೀಜಿಯವರು ಇಂದು ಬದುಕಿದ್ದರೂ ಈ ಯೋಜನೆಯನ್ನು ಸ್ವಾಗತಿಸುತ್ತಿದ್ದರು ಎಂದರು.  

ಈ ಹಿಂದೆ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ನರೇಗಾ ಹೆಸರನ್ನು ಬದಲಿಸಿತ್ತು. 450ಕ್ಕೂ ಹೆಚ್ಚು ಯೋಜನೆಗಳಿಗೆ ನೆಹರು ಕುಟುಂಬದ ಹೆಸರಿಟ್ಟಿತ್ತು. ಅಂದು ಗಾಂಧೀಜಿ ಅಥವಾ ಅಂಬೇಡ್ಕರ್ ಅವರ ಹೆಸರು ನೆನಪಾಗಲಿಲ್ಲವೆ ಎಂದು ರಾಘವೇಂದ್ರ ಪ್ರಶ್ನಿಸಿದರು. ದೇಶದಲ್ಲಿ ಪರಿವರ್ತನೆ ತರಲು ವಿಕಸಿತ ಗ್ರಾಮಗಳ ಕಲ್ಪನೆಯಡಿ ಈ ಯೋಜನೆಯನ್ನು ರೂಪಿಸಲಾಗಿದೆ. ಸಂವಿಧಾನದ ಪುಸ್ತಕ ಹಿಡಿದು ನಾಟಕ ಮಾಡುವ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಈ ಯೋಜನೆಯ ಬಗ್ಗೆ ಬಹಿರಂಗ ಚರ್ಚೆಗೆ ಕೇಂದ್ರದ ನಾಯಕರು ಸಿದ್ಧರಿದ್ದಾರೆ ಎಂದು ಅವರು ಸವಾಲು ಹಾಕಿದರು.

BY-Raghavendra-speaks-in-Shimoga-city

ಇದನ್ನೂ ಓದಿ » ಪಾತ್ರೆ ಮಾರಾಟಕ್ಕೆ ಬಂದವರಿಂದ ಮಹಿಳೆ ಸರ ಅಪಹರಣ, ಎಲ್ಲಿ? ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment