ಶಿವಮೊಗ್ಗ ಬಿಜೆಪಿಯ ‘ಅಚ್ಚರಿ ಅಭ್ಯರ್ಥಿ’ ಹೆಸರು ಪ್ರಕಟಣೆಗೆ ಕ್ಷಣಗಣನೆ

SHIVAMOGGA LIVE NEWS | 18 APRIL 2023

SHIMOGA : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇವತ್ತು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದೆ ವೇಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ (Candidate) ಕುರಿತ ಕುತೂಹಲಕ್ಕೆ ತೆರೆ ಬೀಳು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

BJP-Flag-in-Shimoga

ಬಿಜೆಪಿ ಮೂರನೆ ಪಟ್ಟಿಯಲ್ಲಿಯು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ (Candidate) ಹೆಸರು ಪ್ರಕಟವಾಗಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ. ಆದರು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕಾರ್ಯಕರ್ತರಲ್ಲೂ ಕುತೂಹಲವಾಗಿದೆ.

Shivamogga Live Promotion

ಇವತ್ತು ಪ್ರಕಟ ಸಾಧ್ಯತೆ

ಈ ಭಾರಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಬಿಜೆಪಿ ಪಾಳಯ ಹೇಳುತ್ತಿದೆ. ಈ ಮೂಲಕ ಅಭ್ಯರ್ಥಿ ಕುರಿತು ಜನರಲ್ಲಿ ಕುತೂಹಲ ಹೆಚ್ಚುವಂತೆ ಮಾಡಲಾಗುತ್ತಿದೆ. ಇವತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಇದೆ ವೇಳೆ ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯ ಹೆಸರನ್ನು ಪ್ರಕಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ – ಎರಡು ಪುಟದ ಬಹಿರಂಗ ಪತ್ರ ಬರೆದ ಮಾಜಿ ಸಚಿವ ಈ‍ಶ್ವರಪ್ಪ, ಏನಿದೆ ಅದರಲ್ಲಿ?

ಅಂತೆ ಕಂತೆಗಳದ್ದೇ ಕಾರುಬಾರು

ಬಿಜೆಪಿ ಅಭ್ಯರ್ಥಿಗಳ ಕುರಿತು ಅಂತೆ ಕಂತೆಗಳು ಹೆಚ್ಚಾಗಿವೆ. ಜಾತಿ ಲೆಕ್ಕಾಚಾರ, ಯಾರ ಬೆಂಬಲಿಗರು ಎಂಬ ಲೆಕ್ಕಾಚಾರದಲ್ಲಿ ಇಂತಹವರು ಅಭ್ಯರ್ಥಿಯಾಗಬಹುದು ಎಂದು ಚರ್ಚೆಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು, ಯಾರ ಪರ ಪ್ರಚಾರ ನಡೆಸುವುದು ಎಂಬುದು ತಲೆನೋವಾಗಿದೆ. ಇವತ್ತು ಅಭ್ಯರ್ಥಿಯ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment