ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 DECEMBER 2022
ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಜಿಲ್ಲೆಯ ಹೊಸ ವಿಧಾನಸಭೆ ಕ್ಷೇತ್ರವಾಗಿದೆ. ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಈ ಕ್ಷೇತ್ರವನ್ನು ರಚಿಸಲಾಗಿದೆ. ಅಲ್ಲದೆ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. (Shimoga Rural Legislative Assembly)
ಈವರೆಗು ಮೂರು ಚುನಾವಣೆಗಳನ್ನು ಕ್ಷೇತ್ರ ಕಂಡಿದೆ. ಈ ಪೈಕಿ ಎರಡು ಬಾರಿ ಬಿಜೆಪಿ, ಒಮ್ಮೆ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಖಾತೆ ತೆರೆಯುವ ಹವಣಿಕೆಯಲ್ಲಿದೆ.
ಹೊಳೆಹೊನ್ನೂರು ಕ್ಷೇತ್ರವಾಗಿತ್ತು
2008ಕ್ಕು ಮೊದಲು ಇದು ಹೊಳೆಹೊನ್ನೂರು ವಿಧಾನಸಭೆ ಕ್ಷೇತ್ರವಾಗಿತ್ತು. ಇಲ್ಲಿ ಪಕ್ಷಕ್ಕಿಂತಲು ವ್ಯಕ್ತಿಯ ವರ್ಚಿಸ್ಸಿನ ಆಧಾರದ ಮೇಲೆ ಜನರು ಆರಿಸಿ ಕಳುಹಿಸುತ್ತಿದ್ದರು. 1978ರಲ್ಲಿ ಜಿ.ಬಸವಣ್ಯಪ್ಪ (ಕಾಂಗ್ರೆಸ್ ಐ), 1983ರಲ್ಲಿ ಜಿ.ಬಸವಣ್ಯಪ್ಪ (ಜನತಾ ಪಕ್ಷ), 1985ರಲ್ಲಿ ಬಸವಣ್ಯಪ್ಪ (ಜನತಾ ಪಕ್ಷ), 1989ರಲ್ಲಿ ಕರಿಯಣ್ಣ (ಕಾಂಗ್ರೆಸ್), ಜಿ.ಬಸವಣ್ಯಪ್ಪ (ಜನತಾ ದಳ), 1999ರಲ್ಲಿ ಕರಿಯಣ್ಣ (ಕಾಂಗ್ರೆಸ್) ಗೆಲುವು ಸಾಧಿಸಿದ್ದರು.
ಅತಿ ಹೆಚ್ಚು ಅವಧಿ ಆಯ್ಕೆಯಾಗಿದ್ದ ಜಿ.ಬಸವಣ್ಯಪ್ಪ ಅವರು ಸಚಿವರಾಗಿಯು ಜವಾಬ್ದಾರಿ ನಿಭಾಯಿಸಿದ್ದರು.
Shimoga Rural Legislative Assembly
2008ರಲ್ಲಿ ಪುನರ್ ವಿಂಗಡಣೆ
2008ರ ಬಳಿಕ ಹೊಳೆಹೊನ್ನರು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ರಚಿಸಲಾಯಿತು. ಹಲವು ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಬಂತು. ಆ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಮಧ್ಯೆ ಜೆಡಿಎಸ್ ಕೂಡ ಪೈಪೋಟಿ ಒಡ್ಡಿದೆ.
2008ರಲ್ಲಿ ಕೆ.ಜಿ.ಕುಮಾರಸ್ವಾಮಿ (ಬಿಜೆಪಿ), 2013ರಲ್ಲಿ ಶಾರದಾ ಪೂರ್ಯಾನಾಯ್ಕ್ (ಜೆಡಿಎಸ್), 2018ರಲ್ಲಿ ಅಶೋಕ್ ನಾಯ್ಕ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
Shimoga Rural Legislative Assembly
2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು
2018ರ ಚುನಾವಣೆ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಮೂರು ಪಕ್ಷಗಳು ಅತ್ಯಂತ ಬಿರುಸಾಗಿ ಪ್ರಚಾರ ಕೈಗೊಂಡಿದ್ದವು. ಅಂತಿಮವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶದಲ್ಲಿ ಬಿಜೆಪಿಯ ಕೆ.ಬಿ.ಅಶೋಕ್ ನಾಯ್ಕ್ ಅವರು ಜೆಡಿಎಸ್ ಪಕ್ಷದ ಶಾರದಾ ಪೂರ್ಯಾನಾಯ್ಕ್ ಅವರಿಗಿಂತಲು ಶೇ.2.27ರಷ್ಟು ಹೆಚ್ಚಿಗೆ ಮತ ಪಡೆದು ಗೆಲುವು ಸಾಧಿಸಿದ್ದರು.
Shimoga Rural Legislative Assembly
2018ರ ಚುನಾವಣೆ ಫಲಿತಾಂಶ
ಅಭ್ಯರ್ಥಿ | ಪಡೆದ ಮತ |
ಕೆ.ಬಿ.ಅಶೋಕ್ ನಾಯ್ಕ್ | 69,326 |
ಶಾರದಾ ಪೂರ್ಯನಾಯ್ಕ್ | 65,549 |
ಗೆಲುವಿನ ಅಂತರ | 3777 |
2018ರ ಮತದಾರರ ವಿವರ
ಒಟ್ಟು ಮತದಾರರು | 211546 |
ಚಲಾವಣೆಯಾದ ಮತ | 172362 |
ಮತದಾನ ಪ್ರಮಾಣ | ಶೇ.81.48 |
ಟಿಕೆಟ್ ಗಾಗಿ ಜಿದ್ದಾಜಿದ್ದಿ
ಮೀಸಲು ಕ್ಷೇತ್ರ ಆಗಿರುವುದರಿಂದ ಪರಿಶಿಷ್ಟ ಜಾತಿ ನಾಯಕರು ಇಲ್ಲಿಂದ ಸ್ಪರ್ಧೆಗೆ ತೀವ್ರ ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಈಗಾಗಲೆ ಜೆಡಿಎಸ್ ಪಕ್ಷದಿಂದ ಶಾರದಾ ಪೂರ್ಯನಾಯ್ಕ್ ಅವರ ಸ್ಪರ್ಧೆ ಖಚಿತವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಈಗಾಗಲೆ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಕೆ.ಬಿ.ಅಶೋಕ್ ನಾಯ್ಕ್ ಅವರೆ ಪುನಃ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಲವರು ಅರ್ಜಿ ಸಲ್ಲಸಿದ್ದಾರೆ. ವಿಶೇಷ ಅಂದರೆ ಹೊರ ಜಿಲ್ಲೆಯವರು ಇಲ್ಲಿ ಸ್ಪರ್ಧೆಗೆ ಅರ್ಜಿ ಸಲ್ಲಿಸಿ, ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಜಾತಿವಾರು ಬಲಾಬಲ ಹೇಗಿದೆ?
ಮೀಸಲು ಕ್ಷೇತ್ರವಾದರು ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಪರಿಶಿಷ್ಟ ಜಾತಿ, ಪಂಗಡದ ಮತದಾರರು ನಿರ್ಣಾಯಕರಾಗಿದ್ದಾರೆ. ಉಳಿದಂತೆ ಬ್ರಾಹ್ಮಣ, ಒಕ್ಕಲಿಗ, ಕುರುಬ, ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಕಡಿಮೆ ಪ್ರಮಾಣದಲ್ಲಿ ಇದ್ದರು ಈಡಿಗ ಸಮುದಾಯದ ಮತಗಳು ಸೋಲು, ಗೆಲುವು ನಿರ್ಧರಿಸುವಷ್ಟಿದೆ.
ಶಿವಮೊಗ್ಗ ಜಿಲ್ಲೆಯ ಹೊಸ ವಿಧಾನ ಸಭೆ ಕ್ಷೇತ್ರ ಇದು. ಅಲ್ಲದೆ ಏಕೈಕ ಮೀಸಲು ಕ್ಷೇತ್ರವಾಗಿದೆ. ಹಾಗಾಗಿ ಈ ಕ್ಷೇತ್ರದ ಕುರಿತು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ತೀವ್ರ ಕುತೂಹಲವಿದೆ.
ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422