ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION NEWS : ಬಿಸಿಲಿನ ಝಳ ಹೆಚ್ಚಾದಂತೆ ಶಿವಮೊಗ್ಗದಲ್ಲಿ ಪ್ರಚಾರದ ಕಾವು ಏರುತ್ತಿದೆ. ಮತದಾನಕ್ಕೆ ಇನ್ನು ಎಂಟು ದಿನ ಬಾಕಿ ಇದೆ. ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. ಹಳ್ಳಿ ಹಳ್ಳಿ ತಲುಪುವುದರ ಜೊತೆಗೆ ಪ್ರತಿ ಮನೆಗೆ ಪ್ರತಿಯೊಬ್ಬರ ಮನಕ್ಕೆ ತಲುಪುವ ಪ್ರಯತ್ನ ಆಗಬೇಕಿದೆ. ಇದಕ್ಕಾಗಿ ಒಬ್ಬೊಬ್ಬರು ಒಂದು
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಗ್ಯಾರಂಟಿ VS ಅಭಿವೃದ್ಧಿ VS ಪ್ರತಿಷ್ಠಿತ
ಶಿವಮೊಗ್ಗದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಬಂಡಾಯ ಅಭ್ಯರ್ಥಿ ಮಧ್ಯೆ ತೀವ್ರ ಪೈಪೋಟಿ ಇದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಮ್ಮ ಅವಧಿಯ ಅಭಿವೃದ್ದಿ ಕಾರ್ಯಗಳು, ಮೋದಿ ಅಲೆ, ಯಡಿಯೂರಪ್ಪ ಅವರ ಹೆಸರು, ವೈಯಕ್ತಿಕ ವರ್ಚಿಸ್ಸಿನ ಮೇಲೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಗ್ಯಾರಂಟಿಗಳು ಬಲ ನೀಡಿವೆ. ಮಾಜಿ ಸಿಎಂ ಬಂಗಾರಪ್ಪ ಅವರ ಕಾಲದ ಯೋಜನೆಗಳು, ಸಚಿವ ಮಧು ಬಂಗಾರಪ್ಪ ವರ್ಚಸ್ಸು ಅವರಿಗೆ ಪ್ಲಾಸ್ ಪಾಯಿಂಟ್ ಆಗಿವೆ.
ಇನ್ನೊಂದೆಡೆ ವೈಯಕ್ತಿಕ ಕಾರಣಕ್ಕೆ ಬಂಡಾಯವೆದ್ದಿರುವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಕ್ಲೀನ್ ಮಾಡುವುದು, ಹಿಂದುತ್ವವನ್ನು ಅಜೆಂಡ ಮಾಡಿಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಮನೆ, ಮನಕ್ಕೆ ತಲುಪಲು ಪ್ರಯತ್ನ
ರಾಘವೇಂದ್ರ, ಗೀತಾ ಶಿವರಾಜ್ ಕುಮಾರ್ ಮತ್ತು ಕೆ.ಎಸ್.ಈಶ್ವರಪ್ಪ ಅವರು ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. ಹಳ್ಳಿ ಹಳ್ಳಿ ಪ್ರಚಾರ ಶುರುವಾಗಿದೆ. ಈಗ ಮನೆ, ಮನಕ್ಕೆ ತಲುಪಲು ಕಸರತ್ತು ನಡೆಸಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಸಂತೋಷ್ ಲಾಡ್, ಎಲ್ಲೆಲ್ಲಿ ಪ್ರಚಾರ ಮಾಡ್ತಾರೆ?