ವಿಐಎಸ್‌ಎಲ್‌ನ ಅಧಿಕಾರಿ ಶಿವಮೊಗ್ಗದ ಸಂಸದರಾಗಿದ್ದರು, ಹೇಗದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 APRIL 2024

ELECTION SPECIAL : ತುರ್ತು ಪರಿಸ್ಥಿತಿ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. 1977ರಲ್ಲಿ ಕಾಂಗ್ರೆಸ್‌ ಸೋಲಿಸಿ ಗದ್ದುಗೆ ಹಿಡಿದಿದ್ದ ಜನತಾ ಪಕ್ಷಗಳು ಒಗ್ಗಟು ಕಾಯ್ದುಕೊಳ್ಳಲಾಗದೆ ಸರ್ಕಾರ ಪತನವಾಗಿತ್ತು. ಹಾಗಾಗಿ 1980ರ ಲೋಕಸಭೆ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಎಲ್ಲೆಲ್ಲು ಇಂದಿರಾ ಗಾಂಧಿ ಅಲೆ ಇತ್ತು. ಈ ಹೊತ್ತಿಗೆ ಕಾಂಗ್ರೆಸ್‌ ಪಕ್ಷವು ಹೋಳಾಗಿತ್ತು.

ವಿಐಎಸ್‌ಎಲ್‌ ಅಧಿಕಾರಿ ಸಂಸದರಾದರು

1977ರಲ್ಲಿ ಎ.ಆರ್‌.ಬದರಿನಾರಾಯಣ ಶಿವಮೊಗ್ಗದ ಸಂಸದರಾಗಿದ್ದರು. 1980ರ ಚುನಾವಣೆಯಲ್ಲಿ ಅವರು ದೇವರಾಜು ಅರಸು ಅವರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜನತಾ ಪಕ್ಷದ ಅಭ್ಯರ್ಥಿಯಾಗಿ ಡಿ.ಹೆಚ್‌.ಶಂಕರಮೂರ್ತಿ, ಜನತಾ ಪಕ್ಷ (ಸೆಕ್ಯೂಲರ್‌)ದಿಂದ ಕೋಣಂದೂರು ಲಿಂಗಪ್ಪ ಅವರು ಕಣಕ್ಕಿಳಿದಿದ್ದರು. ಇಂದಿರಾ ಗಾಂಧಿ ಕಾಂಗ್ರೆಸ್‌ನಿಂದ ಹೊಸ ಮುಖಕ್ಕೆ ಅವಕಾಶ ನೀಡಲಾಗಿತ್ತು. ವಿಐಎಸ್‌ಎಲ್‌ನ ಅಧಿಕಾರಿ ಎಸ್‌.ಟಿ.ಖಾದ್ರಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.

ಇಂಜಿನಿಯರ್‌, ಸ್ಟೀಲ್‌ ಸ್ಪೆಷಲಿಸ್ಟ್‌

ಎಸ್‌.ಟಿ.ಖಾದ್ರಿ ಮೂಲತಃ ರಾಯಚೂರಿನ ಕೊಪ್ಪಳದವರು (ಈಗ ಕೊಪ್ಪಳ ಪ್ರತ್ಯೇಕ ಜಿಲ್ಲೆಯಾಗಿದೆ). ಇಂಜಿನಿಯರ್‌ ಮತ್ತು ಸ್ಟೀಲ್‌ ಸ್ಪೆಷಲಿಸ್ಟ್‌ ಆಗಿದ್ದ ಎಸ್‌.ಟಿ.ಖಾದ್ರಿ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಧಿಕಾರಿಯಾಗಿದ್ದರು. ವಿಐಎಸ್‌ಎಲ್‌ ಕಾರ್ಖಾನೆ ವಿಸ್ತರಣೆಗಾಗಿ ದೇಶ, ವಿದೇಶಕ್ಕೆ ಸಂಚರಿಸಿದ್ದರು. 1976ರಲ್ಲಿ ತಮಿಳುನಾಡಿನ ಸೇಲಂ ಸ್ಟೀಲ್‌ ಪ್ಲಾಂಟ್‌ನ ನಿರ್ದೇಶಕರಾಗಿ ಸರ್ಕಾರ ಅವರನ್ನು ನೇಮಿಸಿತ್ತು. ಸಾಮಾಜಿಕ ಚುಟವಟಿಕೆ, ಶಿವಮೊಗ್ಗ, ಭದ್ರಾವತಿಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ಕಾರಣವಾಗಿದ್ದರು. ದಿಢೀರ್‌ ಬೆಳವಣಿಗೆಯಲ್ಲಿ ಎಸ್‌.ಟಿ.ಖಾದ್ರಿ ಅವರನ್ನು ಇಂದಿರಾ ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಸಲಾಯಿತು. ಇಂದಿರಾ ಅಲೆ, ಜನತಾ ಪಕ್ಷದ ವಿರುದ್ಧ ಜನರ ಮುನಿಸು, ಎಸ್‌.ಟಿ.ಖಾದ್ರಿ ಅವರ ಸಾಮಾಜಿಕ ಕಾರ್ಯಗಳ ಕಾರಣಕ್ಕೆ ಗೆಲುವು ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗದ ಈ ಸಂಸದ ಮೂರೇ ವರ್ಷಕ್ಕೆ ಅಧಿಕಾರ ಕಳೆದುಕೊಂಡಿದ್ದರು, ಯಾಕೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 16, 2024

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹಿಂಬದಿಯಿಂದ ಬಂದು ವೃದ್ಧೆಯ ಕೈ ಹಿಡಿದ ಯುವಕ, ಆಗಿದ್ದೇನು?

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹಿಂಬದಿಯಿಂದ ಬಂದು ವೃದ್ಧೆಯ ಕೈ ಹಿಡಿದ ಯುವಕ, ಆಗಿದ್ದೇನು?

ಮೈದೊಳಲಿನಲ್ಲಿ ವೈಭವದ ಬ್ರಹ್ಮ ರಥೋತ್ಸವ, ಏನೇನೆಲ್ಲ ಪೂಜೆ ಆಯ್ತು? ಹೇಗಿತ್ತು ಜಾತ್ರೆ ಸಂಭ್ರಮ?

ಮೈದೊಳಲಿನಲ್ಲಿ ವೈಭವದ ಬ್ರಹ್ಮ ರಥೋತ್ಸವ, ಏನೇನೆಲ್ಲ ಪೂಜೆ ಆಯ್ತು? ಹೇಗಿತ್ತು ಜಾತ್ರೆ ಸಂಭ್ರಮ?

ಶಿವಮೊಗ್ಗದ ಕೋಟೆ ದೇವಸ್ಥಾನದಲ್ಲಿ ಸೋನಿಯಾ ಗಾಂಧಿಗಾಗಿ ವಿಶೇಷ ಪೂಜೆ

ಶಿವಮೊಗ್ಗದ ಕೋಟೆ ದೇವಸ್ಥಾನದಲ್ಲಿ ಸೋನಿಯಾ ಗಾಂಧಿಗಾಗಿ ವಿಶೇಷ ಪೂಜೆ

ಹೊಳೆಹೊನ್ನೂರಿನ ಚನ್ನಗಿರಿ ರಸ್ತೆಯಲ್ಲಿ ಅಪಘಾತ, ಆಸ್ಪತ್ರೆಗೆ ಸಾಗಿಸುವಾಗ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ಹೊಳೆಹೊನ್ನೂರಿನ ಚನ್ನಗಿರಿ ರಸ್ತೆಯಲ್ಲಿ ಅಪಘಾತ, ಆಸ್ಪತ್ರೆಗೆ ಸಾಗಿಸುವಾಗ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ದಾಳಿ

ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ದಾಳಿ

Leave a Comment