APP LOKA | ಈ ಉಚಿತ ಆ್ಯಪ್‌ನಲ್ಲಿ ಸಿಗಲಿದೆ ಪ್ರತಿದಿನದ ಅಡಕೆ ರೇಟ್‌, ಧಾರಣೆಯ ವಿಶ್ಲೇಷಣೆ, ಯಾವುದದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS

APP LOKA : ಅಡಕೆ ಧಾರಣೆಯಲ್ಲಿ (Adike Price) ದಿನೇ ದಿನೆ ವ್ಯತ್ಯಾಸವಾಗುತ್ತದೆ. ಪ್ರತಿ ದಿನ ಅಡಕೆ ರೇಟ್‌ ಎಷ್ಟಾಯ್ತು ಎಂದು ತಿಳಿಯಲು ಬೆಳಗಾರರು ಹರಸಾಹಸ ಪಡುತ್ತಾರೆ. ಮಾರುಕಟ್ಟೆ ಜೊತೆಗೆ ಸಂಪರ್ಕ ಹೊಂದಿರುವ ದೊಡ್ಡ ರೈತರಿಗೆ ಧಾರಣೆ ತಿಳಿಯುವುದು ಸುಲಭ. ಸಣ್ಣಪುಟ್ಟ ರೈತರಿಗೆ ದರ ಗೊತ್ತಾಗುವುದು ಕಷ್ಟ. ಬೆಳೆಗಾರರಿಗೆ ಅಡಕೆ ಧಾರಣೆಯ ಮಾಹಿತಿ ತಿಳಿಸಲೆಂದೇ ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿವೆ.

ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.jpg" alt="App-Loka-thumbnail" width="926" height="521" />

ಯಾವೆಲ್ಲ ಆ್ಯಪ್‌ಗಳಿವೆ?

Adike Price ಎಂಬ ಆ್ಯಪ್‌ನಲ್ಲಿ ರಾಜ್ಯದ ವಿವಿಧ ಮಾರುಕಟ್ಟೆಯ ಅಡಕೆ ಧಾರಣೆ ಸಿಗಲಿದೆ. ಪ್ಲೋ ಸ್ಟೋರ್‌ನಿಂದ ಡೌನ್‌ ಲೋಡ್‌ ಮಾಡಿಕೊಂಡು ಪ್ರತಿ ಮಾರುಕಟ್ಟೆಯ ಮಾಹಿತಿ ಪಡೆಯಬಹುದು. ಅಡಕೆ ಮಾದರಿ, ಅದರ ಕನಿಷ್ಠ ಮತ್ತು ಗರಿಷ್ಠ ದರ, ಧಾರಣೆಯಲ್ಲಿನ ಬದಲಾವಣೆಯ ವಿಶ್ಲೇಷಣೆ ಸಿಗಲಿದೆ. ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಧಾರಣೆಯ ವಿವರ ಸಿಗಲಿದೆ.

WATCH VIDEO

2022ರ ಜನವರಿ 25ರಿಂದ ಈ ಆ್ಯಪ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈತನಕ 10 ಸಾವಿರಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದೆ. ಪ್ಲೇ ಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ ಲೋಡ್‌ ಮಾಡಲು ಕೆಳಗಿರುವ ಲಿಂಕ್‌ ಕ್ಲಿಕ್‌ ಮಾಡಿ.

https://play.google.com/store/apps/details?id=com.nerdlabs.arecanut

(ದಿನ ನಿತ್ಯದ ಉಪಯೋಗಕ್ಕೆ ಅಗತ್ಯವಿರುವ APPಗಳ ಕುರಿತು ನಿಮಗೆ ಗೊತ್ತಿದ್ದಲ್ಲಿ ನಮಗೆ ತಿಳಿಸಬಹುದು. ನಮ್ಮ ಈ ಮೇಲ್‌ shivamoggalive@gmail.com)

ಇದನ್ನೂ ಓದಿ – ಶಿವಮೊಗ್ಗ ಲೈವ್‌ನಲ್ಲಿ ಪ್ರತಿದಿನದ ಅಡಕೆ ಧಾರಣೆ

ಶಿವಮೊಗ್ಗ ಲೈವ್ ವಾಟ್ಸಪ್‌ ಗ್ರೂಪ್‌ ಜಾಯಿನ್‌ ಆಗಲು

Leave a Comment