ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಜಾಗತಿಕವಾಗಿ ಉದ್ಯಮ, ಉದ್ಯೋಗಗಳು whatsapp ಮೇಲೆ ಹೆಚ್ಚು ಅವಲಂಬಿತವಾಗಿವೆ. ವಾಟ್ಸಪ್ ಕೂಡ ಇದಕ್ಕೆ ತಕ್ಕ ಹಾಗೆ updates ಬಿಡುಗಡೆ ಮಾಡಿ, ಮತ್ತಷ್ಟು ಬಳಕೆದಾರರನ್ನು ಸೆಳೆಯುತ್ತಿದೆ. ಈಗ ಇನ್ನೊಂದು updateನ ಕುರಿತು ವಾಟ್ಸಪ್ ಸುಳಿವು ನೀಡಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಒಂದಕ್ಕಿಂತಲು ಹೆಚ್ಚು ವಾಟ್ಸಪ್
ಬಹುತೇಕರು ಒಂದಕ್ಕಿಂತಲು ಹೆಚ್ಚು ವಾಟ್ಸಪ್ ಅಕೌಂಟ್ ಹೊಂದಿದ್ದಾರೆ. ಕೆಲವು ಬಾರಿ ಒಂದು ಅಕೌಂಟ್‌ನಿಂದ ಲಾಗ್ ಔಟ್ ಆಗಿ, ಮತ್ತೊಂದಕ್ಕೆ ಲಾಗ್ ಇನ್ ಆಗುವ ಪರಿಸ್ಥಿತಿ ಇದೆ. ಅನೇಕರು ಈ ಸಮಸ್ಯೆ ಬೇಡ ಎಂದು ಎರಡು ವಾಟ್ಸಪ್‌ಗಳನ್ನು ಡೌನ್ ಲೋಡ್ ಮಾಡಿ ಬಳಸುತ್ತಿದ್ದಾರೆ. ಕೆಲವರು ಎರಡು ಮೊಬೈಲ್‌ಗಳನ್ನು ಹೊಂದಿದ್ದಾರೆ. ಈಗ ಈ ಸಮಸ್ಯೆ ನೀಗಿಸಲು ಒಂದೇ ವಾಟ್ಸಪ್‌ನಲ್ಲಿ ಎರಡು ಅಕೌಂಟ್ ಹೊಂದುವ ಫೀಚರ್‌ನ update ಬಿಡುಗಡೆಯಾಗುತ್ತಿದೆ.
ಒಂದೇ APPನಲ್ಲಿ ಎರಡು ಅಕೌಂಟ್
ಇನ್ಮುಂದೆ ವಾಟ್ಸಪ್‌ನ ಒಂದೇ APPನಲ್ಲಿ ಎರಡು ಅಕೌಂಟ್ ಬಳಸಬಹುದು. ಈ ಅಪ್‌ಡೇಟ್ ಬಿಡುಗಡೆಯಾಗಲಿದೆ ಎಂದು ವಾಟ್ಸಪ್ ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ. ಇದರ ಪೋಸ್ಟರ್ ಕೂಡ ರಿಲೀಸ್ ಮಾಡಿದೆ.
ವಾಟ್ಸಪ್ ಓಪನ್ ಮಾಡಿ settings ಮೇಲೆ ಕ್ಲಿಕ್ ಮಾಡಬೇಕು. ಬಳಕೆದಾರರ ಹೆಸರಿನ ಪಕ್ಕದಲ್ಲಿ arrow ಮಾರ್ಕ್ ಕಾಣಲಿದೆ. ಅದರ ಮೇಲೆ ಕ್ಲಿಕ್ ಮಾಡಿ add account ಮೇಲೆ ಕ್ಲಿಕ್ಕಿಸಿ ಹೊಸ ನಂಬರ್ add ಮಾಡಿದರಾಯ್ತು. ಪ್ರತಿ ಅಕೌಂಟ್‌ಗು ಪ್ರತ್ಯೇಕವಾಗಿ privacy ಮತ್ತು notification settings ಮಾಡಿಕೊಳ್ಳಬಹುದು.
ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಪ್ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರಿಂದ ವಾಟ್ಸಪ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ.