SHIVAMOGGA LIVE NEWS | 13 SEPTEMBER 2023
WHATSAPP NEWS : ಇತ್ತೀಚೆಗಷ್ಟೆ ಕಮ್ಯೂನಿಟಿ ಗ್ರೂಪ್‌ಗಳನ್ನು ರಚಿಸುವ ಫೀಚರ್ ಜಾರಿಗೊಳಿಸಿದ್ದ WhatsApp ಈಗ ಮತ್ತೊಂದು ವಿಭಿನ್ನ ಫೀಚರ್ ಬಿಡುಗಡೆ ಮಾಡಿದೆ. ಭಾರತ ಸೇರಿದಂತೆ 150 ದೇಶಗಳಲ್ಲಿ ವಾಟ್ಸಪ್ ಚಾನಲ್ ಆರಂಭಿಸಿದೆ. ಈಗಾಗಲೆ ಇನ್ಸ್‌ಟಾಗ್ರಾಂ ಮತ್ತು ಟೆಲಿಗ್ರಾಂ ಬಳಸುತ್ತಿರುವವರಿಗೆ ಚಾನಲ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯವೇ ಇಲ್ಲ.
ಭಾರತದಲ್ಲಿ ಈ ಫೀಚರ್ ಲಾಂಚ್ ಆಗುತ್ತಿದ್ದಂತೆ ಸೆಲಬ್ರಿಟಿಗಳು, ಪ್ರಮುಖ ಸಂಸ್ಥೆಗಳು, ಮಾಧ್ಯಮಗಳು ಚಾನಲ್ ಫೀಚರ್ ಕ್ರಿಯೇಟ್ ಮಾಡಿಕೊಂಡಿವೆ.
ಏನಿದು ಚಾನಲ್ ಫೀಚರ್?
ವಾಟ್ಸಪ್‌ನಲ್ಲಿ ಗ್ರೂಪ್ ಕ್ರಿಯೇಟ್ ಮಾಡಬಹುದು. ಆದರೆ ಗ್ರೂಪ್‌ಗೆ ಸೇರುವ ಸದಸ್ಯರ ಸಂಖ್ಯೆಗೆ ಮಿತಿ ಇದೆ. ಹಲವು ಗ್ರೂಪ್‌ಗಳನ್ನು ಸೇರಿಸಿ ಒಂದು ಕಮ್ಯೂನಿಟಿ ರಚಿಸಬಹುದು. ಆದರೆ ಇಲ್ಲಿಯು ಸದಸ್ಯರ ಸಂಖ್ಯೆಗೆ ಮಿತಿ ಇದೆ. ಯಾವುದೆ ಮಿತಿಗಳಿಲ್ಲದೆ, ಫಾಲೋವರ್‌ಗಳ ಪ್ರೈವಸಿಗೆ ಧಕ್ಕೆಯಾಗ ಹೊಸ ಫೀಚರ್ ಲಾಂಚ್ ಮಾಡಲಾಗಿದೆ. ಇದು WhatsApp ಚಾನಲ್ ಎಂದು ಮೆಟಾ ಸಂಸ್ಥೆ ತಿಳಿಸಿದೆ.
ಹೇಗಿರುತ್ತೆ ಚಾನಲ್? ಏನಿದರ ವಿಶೇಷತೆ?
ವಾಟ್ಸಪ್ ಚಾನಲ್‌ನಲ್ಲಿ ಅಡ್ಮಿನ್ ಮಾತ್ರವೇ ಮೆಸೇಜ್ ಕಳುಹಿಸಬಹುದು. ಗ್ರೂಪ್ ಸದಸ್ಯರು ಮಾಹಿತಿಯನ್ನು ಓದಬಹುದಷ್ಟೆ. ಅದಕ್ಕೆ ರಿಪ್ಲೆ ಮಾಡಲು ಸಾಧ್ಯವಿಲ್ಲ. ಎಮೋಜಿಗಳ ಮೂಲಕ ತಮ್ಮ ರಿಯಾಕ್ಷನ್ ನೀಡಬಹುದು.
ಇನ್ನು, ಚಾನಲ್ ಅನ್ನು ಯಾರು ಬೇಕಿದ್ದರು ಫಾಲೋ ಮಾಡಬಹುದು. ಆದರೆ ಫಾಲೋ ಮಾಡಿದ ಯಾರೊಬ್ಬರ ಹೆಸರು, ಮೊಬೈಲ್ ನಂಬರ್ ಉಳಿದವರಾರಿಗೂ ಕಾಣಿಸುವುದಿಲ್ಲ. ಪ್ರೈವಸಿ ಸೆಟಿಂಗ್‌ನ ಆಧಾರದಲ್ಲಿ ಅಡ್ಮಿನ್‌ಗೆ ಮಾತ್ರ ನಿಮ್ಮ ಹೆಸರು, ಡಿಪಿ ಗೋಚರಿಸಬಹುದು. ಇದರಿಂದ ಫಾಲೋವರ್‌ಗಳ ಮೊಬೈಲ್ ನಂಬರ್‌ಗಳು ಸುರಕ್ಷಿತವಾಗಿ ಉಳಿಯಲಿವೆ.
ಚಾನಲ್‌ಗಳನ್ನು ಚೆಕ್ ಮಾಡುವುದು ಹೇಗೆ?
ನಾರ್ಮಲ್ ವಾಟ್ಸಪ್‌ನಲ್ಲಿ UPDATES ಕಾಲಂ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವವರ ಸ್ಟೇಟಸ್‌ಗಳು ನೋಡಲು ಸಿಗುತ್ತವೆ. ಎಲ್ಲಾ ಸ್ಟೇಟಸ್‌ಗಳನ್ನು ಸ್ಕ್ರಾಲ್ ಡೌನ್ ಮಾಡಿದರೆ ಕೊನೆಯಲ್ಲಿ ಚಾನಲ್ ಎಂದು ಸಿಗಲಿದೆ. ಇಲ್ಲಿ ಸರ್ಚ್ ಮಾಡಲು ಅವಕಾಶವಿದೆ. ನಿಮ್ಮ ಆಯ್ಕೆಯ ಚಾನಲ್‌ಗಳನ್ನು ಫಾಲೋ ಮಾಡಲು ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ಇನ್ಮುಂದೆ ಆ ಚಾನಲ್‌ನಲ್ಲಿ ಅಡ್ಮಿನ್ ಯಾವುದೆ ಅಪ್‌ಡೇಟ್ ಮಾಡಿದರು ಫಾಲೋ ಮಾಡಿದವರಿಗೆ ಲಭ್ಯವಾಗಲಿದೆ.
ದೊಡ್ಡ ಸಂಖ್ಯೆಯ ಬಳಕೆದಾರರನ್ನು ತಲುಪಲು ಇದು ಉಪಯುಕ್ತ. ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಷನ್‌ನಲ್ಲಿ ಚಾನಲ್ ಫೀಚರ್ ಇದೆ. ಇನ್ಸ್‌ಟಾಗ್ರಾಂನಲ್ಲಿಯು ಇದೆ ಮಾದರಿಯ ಸೌಲಭ್ಯವಿದೆ. ಈಗ ವಾಟ್ಸಪ್ ತನ್ನ ಬಳಕೆದಾರರ ಅನುಕೂಲಕ್ಕೆ ಚಾನಲ್ ಫೀಚರ್ ನೀಡಿದೆ. ಇದು ವಾಟ್ಸಪ್‌ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಳ ಮಾಡಲಿದೆ.
ಇದನ್ನೂ ಓದಿ – ನೀವು ಇನ್ನೂ ಶಿವಮೊಗ್ಗ ಲೈವ್ ವಾಟ್ಸಪ್ ಗ್ರೂಪ್ ಸೇರಿಲ್ಲವಾ? ಈಗಲೆ ಇಲ್ಲಿ ಕ್ಲಿಕ್ ಮಾಡಿ