ಶಿವಮೊಗ್ಗ: ವಿಶ್ವವಿಖ್ಯಾತ ಜೋಗ್‌ಫಾಲ್ಸ್ ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗವು ವಿಶೇಷ ಪ್ಯಾಕೇಜ್ ಸಾರಿಗೆ ಸೇವೆ ಆರಂಭಿಸಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷ ಬಸ್ಸುಗಳ ಕಾರ್ಯಾಚರಣೆ ನಡೆಯಲಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ವಿಶೇಷ ಸಾರಿಗೆಯು ಶಿವಮೊಗ್ಗ ಬಸ್ ನಿಲ್ದಾಣದಿಂದ ಹೊರಟು ಸಿಗಂದೂರು, ವರದಾಮೂಲ, ಇಕ್ಕೇರಿ ಮತ್ತು ಕೆಳದಿ ಮಾರ್ಗವಾಗಿ ಜೋಗ್‌ಫಾಲ್ಸ್‌ಗೆ ತಲುಪಲಿದೆ.
ಇಲ್ಲಿದೆ ಟೈಮಿಂಗ್ಸ್
- ಶಿವಮೊಗ್ಗದಿಂದ ಹೊರಡುವ ಸಮಯ: ಬೆಳಿಗ್ಗೆ 8 ಗಂಟೆ
- ಜೋಗ್‌ಫಾಲ್ಸ್ ತಲುಪುವ ಸಮಯ: ಮಧ್ಯಾಹ್ನ 2 ಗಂಟೆ
- ಜೋಗ್‌ಫಾಲ್ಸ್‌ನಿಂದ ಹಿಂತಿರುಗುವ ಸಮಯ: ಸಂಜೆ 5 ಗಂಟೆ
- ಶಿವಮೊಗ್ಗ ತಲುಪುವ ಸಮಯ: ರಾತ್ರಿ 7:30ಕ್ಕೆ
ಪ್ರಯಾಣ ದರ
ವಿಶೇಷ ಸಾರಿಗೆಯಲ್ಲಿ ವಯಸ್ಕರಿಗೆ ₹450, ಮಕ್ಕಳಿಗೆ ₹250 ದರ ನಿಗದಿ ಮಾಡಲಾಗಿದೆ. ಮಳೆಗಾಲದಲ್ಲಿ ಜೋಗ ಜಲಪಾತ, ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವವರು ಈ ಪ್ಯಾಕೇಜ್ ಸಾರಿಗೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:➤ ಜನಶತಾಬ್ದಿ ರೈಲು: ಅರ್ಧ ಗಂಟೆ ವಿಳಂಬ, ಎಲೆಕ್ಟ್ರಿಕ್ ಇಂಜಿನ್ ಮುಂದೆ ಡಿಸೇಲ್ ಇಂಜಿನ್ ಜೋಡಿಸಿ ಚಾಲನೆ