NEWS HIGHLIGHTS
RAILWAY NEWS: ಶಿವಮೊಗ್ಗ-ಶೃಂಗೇರಿ- ಮಂಗಳೂರು ನೂತನ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆ (FLS) ಮತ್ತು ವಿಸ್ತ್ರತ ಯೋಜನಾ ವರದಿ (DPR) ತಯಾರಿಕೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ. ಶೀಘ್ರ ರೈಲ್ವೆ ಇಲಾಖೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
₹3,300 ಕೋಟಿ ಅಂದಾಜು ವೆಚ್ಚದ ಈ ಮಾರ್ಗವು 332 ಕಿ.ಮೀ ವ್ಯಾಪ್ತಿ ಹೊಂದಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮಾರ್ಗವು ಹೊಸನಗರ, ತೀರ್ಥಹಳ್ಳಿ, ಶೃಂಗೇರಿ ಹಾಗೂ ಕಾರ್ಕಳ ತಾಲ್ಲೂಕುಗಳನ್ನು ಸಂಪರ್ಕಿಸಲಿದೆ ಎಂದು ಸಂಸದ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ರೈಲ್ವೆ ಮಾರ್ಗವು ಮಲೆನಾಡು ಮತ್ತು ಕರಾವಳಿಯ ನಡುವೆ ವಾಣಿಜ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ’
– ಬಿ.ವೈ.ರಾಘವೇಂದ್ರ, ಸಂಸದ
ಇದನ್ನೂ ಓದಿ:➤ ಜನಶತಾಬ್ದಿ ರೈಲು: ಅರ್ಧ ಗಂಟೆ ವಿಳಂಬ, ಎಲೆಕ್ಟ್ರಿಕ್ ಇಂಜಿನ್ ಮುಂದೆ ಡಿಸೇಲ್ ಇಂಜಿನ್ ಜೋಡಿಸಿ ಚಾಲನೆ