ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 MAY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAILWAY NEWS : ಮೇ 7ರಂದು ರಾಜ್ಯದಲ್ಲಿ ಲೋಕಸಭೆಯ ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆ ವಿಶೇಷ ರೈಲು ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮೈಸೂರು – ತಾಳಗುಪ್ಪ ವಿಶೇಷ ರೈಲು
ಮೈಸೂರು – ತಾಳಗುಪ್ಪ – ಮೈಸೂರು ವಿಶೇಷ ರೈಲು. ಏ.6ರಂದು ರಾತ್ರಿ 9.30ಕ್ಕೆ ಮೈಸೂರಿನಿಂದ ಹೊರಟು ಏ.7ರಂದು ಬೆಳಗ್ಗೆ 9ಕ್ಕೆ ತಾಳಗುಪ್ಪ ತಲುಪಲಿದೆ. ಏ.7ರಂದು ಸಂಜೆ 6.30ಕ್ಕೆ ಹೊರಟು ಏ.8ರಂದು ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಬೆಂಗಳೂರು, ತುಮಕೂರು, ಬೀರೂರು ಮಾರ್ಗದಲ್ಲಿ ಸಂಚರಿಸಲಿದೆ.
ರಾಜ್ಯದ ವಿವಿಧೆಡೆ ವಿಶೇಷ ರೈಲು
ಬೆಂಗಳೂರು – ವಿಜಯಪುರ – ಬೆಂಗಳೂರು – ಮೇ.6ರಂದು ಸಂಜೆ 7ಕ್ಕೆ ಹೊರಟು ಮೇ.7ರಂದು ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ. ಮೇ.7ರಂದು ಸಂಜೆ 7ಕ್ಕೆ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ.
ಯಶವಂತಪುರ – ಬೀದರ್ – ಯಶವಂತಪುರ – ಮೇ.6ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಹೊರಟು ಮೇ.7ರಂದು ಮಧ್ಯಾಹ್ನ 12ಕ್ಕೆ ಬೀದರ್ ತಲುಪಲಿದೆ. ಮೇ.7ರಂದು ಮಧ್ಯಾಹ್ನ 2.10ಕ್ಕೆ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ – ವಿಜಯನಗರ – ಯಶವಂತಪುರ : ಮೇ.6ರಂದು ರಾತ್ರಿ 9.55ಕ್ಕೆ ಹೊರಟು ಮೇ.7ರಂದು ಬೆಳಗ್ಗೆ 10.30ಕ್ಕೆ ವಿಜಯನಗರ ತಲುಪಲಿದೆ. ಮೇ.7ರಂದು ಸಂಜೆ 4.30ಕ್ಕೆ ಹೊರಟು ಮರುದಿನ ಬೆಳಗ್ಗೆ 5.25ಕ್ಕೆ ಯಶವಂತಪುರ ತಲುಪಲಿದೆ.
ಬೆಳಗಾವಿ – ಯಶವಂತಪುರ : ಮೇ.6ರಂದು ಬೆಳಗ್ಗೆ 8ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 8 ಗಂಟೆಗೆ ಯಶವಂತಪುರ ತಲುಪಲಿದೆ.
ಬೆಳಗಾವಿ – ಮೈಸೂರು : ಮೇ.6ರಂದು ಬೆಳಗ್ಗೆ 8.45ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 8.15ಕ್ಕೆ ಮೈಸೂರು ತಲುಪಲಿದೆ.
ಮೈಸೂರು – ಕಾರವಾರ : ಮೇ.3 ಮತ್ತು ಮೇ.6 ರಾತ್ರಿ 8.15ಕ್ಕೆ ಮೈಸೂರಿನಿಂದ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಕಾರವಾರ ತಲುಪಲಿದೆ.
ಕಾರವಾರ – ಮೈಸೂರು : ಮೇ.4 ಮತ್ತು ಮೇ.7 ರಾತ್ರಿ 10ಕ್ಕೆ ಕಾರವಾರದಿಂದ ಹೊರಟು ಮರುದಿನ ಸಂಜೆ 6.25 ಗಂಟೆಗೆ ಕಾರವಾರ ತಲುಪಲಿದೆ.
ಇದನ್ನೂ ಓದಿ – ಅಡಿಕೆ ಧಾರಣೆ | 2 ಮೇ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?