ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHOPPING CENTRE | ಇಲ್ಲಿ ಸಿಗುವ ಬಟ್ಟೆಗಳು ಅಂದ, ಚಂದ ಅಷ್ಟೆ ಅಲ್ಲ ಆರೋಗ್ಯಕ್ಕೆ ಉತ್ತಮ. ಈ ಬಟ್ಟೆಗೆ ವಿಶ್ವದೆಲ್ಲೆಡೆ ಡಿಮಾಂಡ್ ಇದೆ. ಆದರೂ ಬೆಲೆ ದುಬಾರಿಯೇನಲ್ಲ. ಇದೆ ಕಾರಣಕ್ಕೆ ಶಿವಮೊಗ್ಗದ ದೇಸಿ ಅಂಗಡಿ (Desi Angadi) ದೊಡ್ಡ ಸಂಖ್ಯೆಯ ಗ್ರಾಹಕರನ್ನು ಸಂಪಾದಿಸಿದೆ.
ಶಿವಮೊಗ್ಗ ಪ್ರಖ್ಯಾತ ಮೀನಾಕ್ಷಿ ಭವನ ಹೊಟೇಲ್ ಕಟ್ಟಡದಲ್ಲಿಯೇ ದೇಸಿ ಅಂಗಡಿ (Desi Angadi) ಇದೆ. ಮೀನಾಕ್ಷಿ ಭವನ ಹೊಟೇಲ್ ಪ್ರವೇಶದ್ವಾರದ ಪಕ್ಕದಲ್ಲಿರುವ ಮೆಟ್ಟಿಲು ಹತ್ತಿದರೆ ನೇರವಾಗಿ ದೇಸಿ ಅಂಗಡಿಯೊಳಗೆ ಪ್ರವೇಶಿಸುತ್ತೇವೆ.ಎಲ್ಲಿದೆ ಈ ದೇಸಿ ಅಂಗಡಿ?
ಗಿಜಿಗುಡವಷ್ಟು ಜನ, ಕಿವಿಗಡಚ್ಚಿಕ್ಕುವಂತಹ ಹಾಡು ಇದ್ಯಾವುದು ಇಲ್ಲಿರಲ್ಲ. ಅತ್ಯಂತ ಪ್ರಶಾಂತವಾಗಿ ಬಟ್ಟೆ ಖರೀದಿಸಬಹುದಾಗಿದೆ. ಮಹಿಳೆಯರು, ಪುರುಷರು, ಮಕ್ಕಳಿಗೆ ಪ್ರತ್ಯೇಕ ವಿಭಾಗವಿದೆ. ಸೀರೆಗಳು ಮತ್ತು ಕೆಲವು ಬಟ್ಟೆಗಳನ್ನು ಓಪನ್ ಮಾಡಿ ಪ್ರದರ್ಶಿಸಲಾಗಿದೆ. ಟೆರ್‍ರಾಕೋಟ ಆಭರಣಗಳು ಕಣ್ಸೆಳೆಯುತ್ತವೆ. ದೇಸಿ ಅಂಗಡಿಯಲ್ಲಿ ಮಹಿಳೆಯರಿಗೆ ಸೀರೆಗಳು, ವಿವಿಧ ಸೈಸ್ ಗಳಲ್ಲಿ ಚೂಡಿ ಟಾಪ್, ಕುರ್ತಾ, ಮೀಡಿಯಮ್ ಟಾಪ್, ಶಾರ್ಟ್ ಟಾಪ್, ವೆಸ್ಟ್ ಕೋಟ್, ದುಪ್ಪಟ್ಟಗಳು ಸಿಗಲಿದೆ. ಅಷ್ಟೆ ಅಲ್ಲ, ಮಹಿಳೆಯರು ಹೆಚ್ಚು ಇಷ್ಟಪಡುವ ವೆರೈಟಿ ಬ್ಯಾಗುಗಳು ಇಲ್ಲಿ ಲಭ್ಯ. ಪುರುಷರಿಗೆ ಕುರ್ತಾ, ಶರ್ಟ್, ಪೈಜಾಮಾ, ವೆಸ್ಟ್ ಕೋಟ್ ಗಳು ವಿವಿಧ ಸೈಸ್ ಗಳಲ್ಲಿ ಸಿಗಲಿದೆ. ಮಕ್ಕಳಿಗು ಕೂಡ ವಿವಿಧ ಬಗೆಯ ಡ್ರೆಸ್ ಗಳು ಸಿಗುತ್ತವೆ. ಮನೆಗೆ ಬೇಕಾದ ಬೆಡ್ ಶೀಟ್, ಶುದ್ಧ ಜೇನುತುಪ್ಪ, ಜೋನಿ ಬೆಲ್ಲ ಸೇರಿದಂತೆ ಹಲವು ಗೃಹೋಪಯೋಗಿ ಉತ್ಪನ್ನಗಳು ಮಾರಾಟಕ್ಕಿವೆ.ಹೇಗಿದೆ ಅಂಗಡಿ? ಏನೆಲ್ಲ ಸಿಗಲಿದೆ?
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
ಚರ್ಮಕ್ಕೇನು ಹಾನಿ ಇಲ್ಲ
ದೇಸಿ ಅಂಗಡಿಯಲ್ಲಿ ಸಿಗುವ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ ಮತ್ತು ಪರಿಸರ ಸ್ನೇಹಿ. ಇಲ್ಲಿ ಸಿಗುವ ಎಲ್ಲಾ ಬಗೆಯ ಬಟ್ಟೆಗಳು ಹ್ಯಾಂಡ್ ಮೇಡ್. ಇದೇ ಕಾರಣಕ್ಕೆ ಈ ಬಟ್ಟೆಗಳಿಗೆ ಭಾರಿ ಬೇಡಿಕೆ ಇದೆ. ಈ ಬಟ್ಟೆಗಳನ್ನು ಧರಿಸಿದ ಬಹುತೇಕರು ಪುನಃ ಬಂದು ಖರೀದಿ ಮಾಡುತ್ತಾರೆ.
ಸಾಗರ ತಾಲೂಕು ಹೆಗ್ಗೋಡಿನ ಚರಕ ಸಂಸ್ಥೆಯಲ್ಲಿ ಬಟ್ಟೆಗಳು ಸಿದ್ಧವಾಗುತ್ತವೆ. ಹತ್ತಿಯಿಂದ ಚರಕದ ಮೂಲಕ ನೂಲು ತೆಗೆದು ಬಟ್ಟೆಯನ್ನು ನೆಯ್ಗೆ ಮಾಡಲಾಗುತ್ತದೆ. ಇನ್ನು, ಬಟ್ಟೆಗಳಿಗೆ ನೈಸರ್ಗಿಕ ಬಣ್ಣಗಳನ್ನು ಮಾತ್ರ ಉಪಯೋಗಿಸಲಾಗುತ್ತದೆ. ಬಟ್ಟೆ ಮೇಲಿನ ಡಿಸೈನ್ ಗಳು ಕೂಡ ಹ್ಯಾಂಡ್ ಮೇಡ್. ಇದೆ ಕಾರಣಕ್ಕೆ ಯಂತ್ರಗಳ ಮೂಲಕ ಉತ್ಪಾದಿಸಿದ ಬಟ್ಟೆಗಿಂತಲು ಇವು ಭಿನ್ನವಾಗಿ ಕಾಣುತ್ತವೆ. ಇದನ್ನು ಧರಿಸಿದವರು ವಿಶೇಷವಾಗಿ ಕಾಣಿಸುತ್ತಾರೆ.
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ಗೂಗಲ್ ರೇಟಿಂಗ್, ಬೆಂಗಳೂರಲ್ಲು ಮಳಿಗೆ
ದೇಸಿ ಅಂಗಡಿ ಶಿವಮೊಗ್ಗಕ್ಕಷ್ಟೆ ಸೀಮಿತವಲ್ಲ. ಸಾಗರ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 080-26792118 ಅಥವಾ 9900257910 ಸಂಪರ್ಕಿಸಬಹುದು. ದೇಸಿ ಅಂಗಡಿಗಳಿಗೆ ಗೂಗಲ್ ರೇಟಿಂಗ್ ಕೂಡ ಚನ್ನಾಗಿದೆ. ಉತ್ತಮ ಕಾಮೆಂಟ್ ಕೂಡ ಕಾಣಸಿಗುತ್ತವೆ.
ಅಸಕ್ತರು ಶಿವಮೊಗ್ಗದ ಮೀನಾಕ್ಷಿ ಭವನ ಕಟ್ಟಡದಲ್ಲಿರುವ ದೇಸಿ ಅಂಗಡಿಗೆ ಭೇಟಿ ನೀಡಬಹುದು. ಕಡಿಮೆ ದರದಲ್ಲಿ ನಮ್ಮೂರಲ್ಲೆ ಸಿದ್ಧವಾದ ಉತ್ಪನ್ನವನ್ನು ಖರೀದಿಸಿ, ಧರಿಸಬಹುದಾಗಿದೆ.
ಇದನ್ನೂ ಓದಿ ⇒ ರೀಲ್ಸ್ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್ ಉದಾಹರಣೆಗಳು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422